ಕೋಟ :ರೈತರೆಡೆಗೆ ನಮ್ಮ ನಡಿಗೆ 21ನೇ ಮಾಲಿಕೆ – ಯುವ ಕೃಷಿಕ ರೂಪೇಶ್ ಶೆಟ್ಟಿ ಆಯ್ಕೆ

0
348

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ 21ನೇ ಮಾಲಿಕೆ ಜ.8ರಂದು ಪೂ.10.ಗ ಸ್ವಗೃಹದಲ್ಲಿ ಮಣೂರು ಪರಿಸರದ ಯುವ ಕೃಷಿಕ ರೂಪೇಶ್ ಶೆಟ್ಟಿಯವರನ್ನು ಗೌರವಿಸಲಿದ್ದೇವೆ., ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ಈ ಗೌರವ ನೀಡಲಿದ್ದೇವೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here