ಕೋಟ :ಜ.28ಕ್ಕೆ ಕೋಟ ಪಂಚವರ್ಣದ ಆಶ್ರಯದಲ್ಲಿ ಪರಿಸರ ಮಾಹಿತಿ ಕಾರ್ಯಾಗಾರ ಸರಣಿ 7ನೇ ಮಾಲಿಕೆ

0
349

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಇವರ ಸಹಯೋಗದೊಂದಿಗೆ ಗ್ರಾಮ ವಿಕಾಸ ಸಮಿತಿ ಹಾವಂಜೆ ಇವರ ಸಂಯೋಜನೆಯಲ್ಲಿ ಪರಿಸರಸ್ನೇಹಿ 7ನೇ ಸರಣಿ ಕಾರ್ಯಕ್ರಮ ಮಾಲಿಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಕ್ರಾಂತಿ ಸೃಷ್ಠಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಈ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ಕಾರ್ಯಾಗಾರ ಇದೇ ಜ. 28ರಂದು ಪೂ.10.ಗ ಹಾವಂಜೆಯ ಕಿಳಂಜೆ ಪರಿಸರದ ಬಿ.ವಿ ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಪರಿಸರವಾದಿ ಬಾಲಕೃಷ್ಣ ಮುದ್ದೋಡಿ ಭಾಗವಹಿಸಲಿದ್ದು ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಈಕಾರ್ಯಕ್ರಮ ಜರಗಲಿಕ್ಕಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here