ಪಂಚವರ್ಣ ರಜತ ಗೌರವಕ್ಕೆ ಅನಾಥ ಜೀವಗಳ ಆಶ್ರಯದಾತ ಹ.ರಾ ವಿನಯಚಂದ್ರ ಸಾಸ್ತಾನ ಆಯ್ಕೆ

0
373

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ಬಾರಿ ಕಾರ್ಕಳದ ರಂಗನಪಲ್ಕೆಯಲ್ಲಿರುವ ಹೊಸಬೆಳಕು ಅನಾಥಾಶ್ರಮದ ಸೇವಾ ಪ್ರತಿನಿಧಿ ಹ.ರಾ ವಿನಯಚಂದ್ರ ಸಾಸ್ತಾನ ಇವರನ್ನು ಆಯ್ಕೆಗೊಳಿಸಲಾಗಿದೆ.

ಸಾಸ್ತಾನ ಮಿತ್ರರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ಹಾಗೂ ಪರಿಸರಸ್ನೇಹಿಯಾಗಿ ಗುರುತಿಸಿಕೊಂಡ ಶ್ರೀಯುತರು ಹಲವಾರು ಸಂಘಸಂಸ್ಥೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಪರಿಸರಸಂಪನ್ಮೂಲ ವ್ಯಕ್ಯಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚವರ್ಣ ಸಂಸ್ಥೆ ನೀಡುತ್ತಿರುವ ಮೂರನೇ ಸಾಧಕ ಶಕ್ತಿಯಾಗಿದ್ದು ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಜಿ.ತಿಮ್ಮ ಪೂಜಾರಿ,ಸಮಾಜಸೇವಕ ಈಶ್ವರ್ ಮಲ್ಪೆ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ಇದೇ ಬರುವ ಫೆ.25ರಂದು ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಗಳ ಸಮ್ಮುಖದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here