ಪಂಚವರ್ಣ ಸಂಸ್ಥೆ ಪುನಿತ್ ರಾಜ್ ಕುಮಾರ್ ಸವಿನೆನಪಿಗಾಗಿ ವಿದ್ಯಾರ್ಥಿ ದತ್ತು ಸ್ವೀಕಾರ, ಪರಿಕರ ವಿತರಣೆ

0
480

ಹಸಿದವರಿಗೆ ಅನ್ನ ನೀಡಿದಂತೆ ಶೈಕ್ಷಣಿಕ ದತ್ತು ಸ್ವೀಕಾರವು ಶ್ರೇಷ್ಠವಾದ ಕಾರ್ಯ- ಜಿ.ಸತೀಶ್ ಹೆಗ್ಡೆ.

ಕುಂದಾಪುರ ಮಿರರ್ ಸುದ್ದಿ…
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ಶಿವಿನ್ ಗ್ರೂಪ್ ಬೆಂಗಳೂರು ಇವರ ಸಹೋಗದಲ್ಲಿ ದಿ.ಪುನಿತ್ ರಾಜ್ ಕುಮಾರ್ ಸವಿನೆನಪಿಗಾಗಿ ಮೂವರು ಬಡ ವಿದ್ಯಾರ್ಥಿಗಳನ್ನು ಈಗಾಗಲೇ ಶೈಕ್ಷಣಿಕ ದತ್ತು ಸ್ವೀಕರಿಸಿದ್ದು ಈ ಹಿನ್ನಲ್ಲೆಯಲ್ಲಿ ಬೆಂಗಳೂರಿನ ಶಿವಿನ್ ಗ್ರೂಪ್ ನ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪರಿಕರ,ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಜೂ.27ರಂದು ಪಂಚವರ್ಣ ಕಛೇರಿಯಲ್ಲಿ ನಡೆಯಿತು.

ಪರಿಕರ ವಿತರಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಜಿ.ಸತೀಶ್ ಹೆಗ್ಡೆ ಪಂಚವರ್ಣ ಸಂಸ್ಥೆಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ, ಸಂಘಸಂಸ್ಥೆಗಳ ಈ ಸಾಮಾಜಿಕ ಕಾರ್ಯಕ್ರಮ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಹಸಿದವರಿಗೆ ಅನ್ನ ನೀಡಿವುದೇ ಸರ್ವಶ್ರೇಷ್ಠವಾದ ಕಾರ್ಯವಾಗಿದೆ ಇಂಥಹ ಕಾರ್ಯಕ್ರಮ ಶಿಕ್ಷಣ ವ್ಯವಸ್ಥೆಯಲ್ಲಿ ರೂಪಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪಂಚವರ್ಣ ಸಂಸ್ಥೆ ಮೂವರು ಮತ್ತು ಇತರ ಮೂವರು ವಿದ್ಯಾರ್ಥಿಗಳ ಶಿವಿನ್ ಗ್ರೂಪ್ ಬೆಂಗಳೂರು ಸಹಯೋಗದೊಂದಿಗೆ ಶೈಕ್ಷಣಿಕ ಪರಿಕರ, ಅರ್ಥಿಕ ಸಹಾಯ, ಉಡುಪುಗಳನ್ನು ಹಸ್ತಾಂತರಿಸಲಾಯಿತು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೋಟ ಮಣೂರು ಗೀತಾನಂದ ಫೌಂಡೇಶನ್ ನಿರ್ದೇಶಕ ರಕ್ಷಿತ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಶಿವಿನ್ ಗ್ರೂಪ್ ಬೆಂಗಳೂರು ಇದರ ನರೇಶ್ ಭಟ್, ಪಂಚವರ್ಣ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಯುವಕ ಮಂಡಲದ ಸ್ಥಾಪಕ ಸದಸ್ಯ ನರಸಿಂಹ ಗಾಣಿಗ, ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು, ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಸಮಾಜ ಸೇವಕ ರಮೇಶ್ ಭಟ್, ಪಂಚರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು. ಪಂಚವರ್ಣ ಮಹಿಳಾ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ವಂದಿಸಿದರು.

LEAVE A REPLY

Please enter your comment!
Please enter your name here