ಉಪ್ಪುಂದ ಕರ್ಕಿಕಳಿ ದೋಣಿ ಮುಳುಗಡೆ : ನಾಪತ್ತೆಯಾಗಿದ್ದ ಸತೀಶ್ ಖಾರ್ವಿ ಶವ ಪತ್ತೆ

0
343

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೈಂದೂರು ತಾಲೂಕಿನ ಉಪ್ಪುಂದದ ಕರ್ಕಿಕಳಿಯಲ್ಲಿ ನಡೆದ ನಾಡದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಮೀನುಗಾರ ಸತೀಶ್ ಖಾರ್ವಿ ಶವ ಮಂಗಳವಾರ ರಾತ್ರಿ ಪತ್ತೆಯಾಗಿದೆ.

ಉಪ್ಪುಂದ ಸಮೀಪದ ಕೊಡೇರಿ ಬಂದರು ಸಿ ವಾಕ್ ಬಲಬದಿಯಲ್ಲಿ ಸತೀಶ್ ಖಾರ್ವಿ ಶವ ತೇಲಿ ಬಂದಿದ್ದು ಸ್ಥಳೀಯರು ಗುರುತಿಸಿ ಮಾಹಿತಿ ನೀಡಿದ್ದಾರೆ.

ನಿನ್ಬೆಯಿಂದಲೂ ಸ್ಥಳೀಯರು ಹಾಗೂ ಪೊಲೀಸರು ಸತೀಶ್ ಖಾರ್ವಿಗಾಗಿ ಶೋಧ ಕಾರ್ಯ ನಡೆಸಿದ್ದರು.

LEAVE A REPLY

Please enter your comment!
Please enter your name here