ಗುಂಡ್ಮಿ- ಹದ್ದಿನಬೆಟ್ಟು ಲಸಿಕೆ, ಬಡ ಹೆಣ್ಣು ಮಕ್ಕಳಿಗೆ ವಸ್ತ್ರ ವಿತರಣೆ

0
385

ಕುಂದಾಪುರ ಮಿರರ್ ಸುದ್ದಿ.
ಕೋಟ:
ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋವಿಡ್ ಲಸಿಕೆ ವಿತರಣೆ ಹಾಗೂ ಸಾಸ್ತಾನದ ಬಿ.ಹ್ಯುಮನ್ ಸರ್ವಿಂಗ್ ಹ್ಯುಮಾನಿಟಿ ಇದರ ವತಿಯಿಂದ ವಸ್ತ್ರ ವಿತರಣೆ ಕಾರ್ಯಕ್ರಮ ಗುಂಡ್ಮಿ ಹದ್ದಿನಬೆಟ್ಟು ವ್ಯಾಪ್ತಿಯ ಅಂಗನವಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಮಾತನಾಡಿ ಲಸಿಕೆಯ ಬಗ್ಗೆ ಅಪನಂಬಿಕೆ ಇರಬಾರದು ಅದನ್ನು ಹೊಗಲಾಡಿಸಲು ಸರಕಾರದ ದೇಶಾದ್ಯಂತ ಬೃಹತ್ ಮಟ್ಟದ ಲಸಿಕಾ ಅಭಿಯಾನ ಕೈಗೊಂಡಿವೆ.ಕೊರೋನಾ ಕಡಿಮೆಯಾಗಿದೆ ಎಂದು ನಿರ್ಲಕ್ಷದಿಂದ ಸಂಚರಿಸಬೇಡಿ ಸಾಮಾಜಿಕ ಅಂತರದಲ್ಲಿ ವ್ಯವಹರಿಸಿ ಆರೋಗ್ಯವಂತ ಸಮಜಕ್ಕಾಗಿ ಶ್ರಮಿಸಿ ಎಂದು ಕರೆ ಇತ್ತರು.

ಸಾಸ್ತಾನದ ಬಿ.ಹ್ಯುಮನ್ ಸರ್ವಿಂಗ್ ಹ್ಯುಮಾನಿಟಿ ಇದರ ಪರವಾಗಿ ವಕೀಲ ನೀಲ್ ಫೆರೇರ ಮಾತನಾಡಿ ಬಡ ಹೆಣ್ಣು ಮಕ್ಕಳ ಪರವಾಗಿ ಕಾರ್ಯನಿರ್ವಹಿಸಲು ಬಿ.ಹ್ಯುಮನ್ ಸರ್ವಿಂಗ್ ಸದಾ ಸಿದ್ಧವಿದೆ.ಆರೋಗ್ಯ ,ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಈ ಸಂಸ್ಥೆ ಮೊದಲಿಗರಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪಾರ್ವತಿಗಣೇಶ್ ಖಾಸಗಿ ಕಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ನಾಗೇಶ್ ಮಯ್ಯ,ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವಿನ್ನು .ಸಿ.ಎ, ಬಿ.ಹ್ಯುಮನ್ ಸರ್ವಿಂಗ್ ಹ್ಯೂಮೆನಿಟಿ ಆಲಿ ಅಸ್ಗರ್,ರಜಾಕ್,ಅಲ್ತಾಫ್,ನಿವೃತ್ತ ಆರೋಗ್ಯ ನಿರೀಕ್ಷ ರತ್ನಾಕರಯ್ಯ ದೊಡ್ಮನೆ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು .ಕಾರ್ಯಕ್ರಮ ವನ್ನು ಪಟ್ಟಣಪಂಚಾಯತ್ ಸದಸ್ಯ ರವೀಂದ್ರ ಕಾಮತ್ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here