ಕೋಟ- ಅಮೃತೇಶ್ವರಿ ಎರಡನೇ ದಿನದ ಶರನ್ನವರಾತ್ರಿ ಧಾರ್ಮಿಕ ಕಾರ್ಯದಲ್ಲಿ ಸಚಿವ ಕೋಟ ಭಾಗಿ

0
547

ಕುಂದಾಪುರ ಮಿರರ್ ಸುದ್ದಿ..
ಕೋಟ:
ಪುರಾಣಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ದೇವಳದಲ್ಲಿ ಎರಡನೇ ದಿನದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮಗಳು ನೆರವೆರಿದವು,

ಎರಡನೇ ದಿನದ ಪೂಜಾ ಕಾರ್ಯವನ್ನು ರಾಜ್ಯದ ಸಮಾಜಕಲ್ಯಾಣ,ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಂಪತಿಗಳು ಸೇವಾರೂಪದಲ್ಲಿ ಚಂಡಿಕಾಸಪ್ತಸತಿ ಪಾರಾಯಣ,ದುರ್ಗಾಯಾಗದಲ್ಲಿ ಭಾಗಿಯಾದರು.

ಧಾರ್ಮಿಕ ಕಾರ್ಯಕ್ರಮಗಳನ್ನು ವೇ.ಮೂ.ಮಧುಸೂದನ ಬಾಯರಿ ನೇತ್ರತ್ವದಲ್ಲಿ ಸಮ್ಮುಖದಲ್ಲಿ ನಡೆದವು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ.ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ,ಜಿ.ಸತೀಶ್ ಹೆಗ್ಡೆ,ರಾಮದೇವ ಐತಾಳ್, ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರ ಆಚಾರ್ಯ,ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ್, ಉದ್ಯಮಿ ಸುನೀಲ್ ಪೂಜಾರಿ ಬೆಳಗಾವಿ,ಕೋಟ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಪ್ರಭು,ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here