ಕೋಟ :ಪಂಚವರ್ಣದ 211ನೇ ವಾರದ ಪರಿಸರಸ್ನೇಹಿ ಹಸಿರು ಜೀವ ಯೋಜನೆ

ಗಿಡ ನೆಡುವ ಕಾರ್ಯ ಅತ್ಯಂತ ಪ್ರಶಂಸನೀಯ – ಪ್ರಕಾಶ್ ಹಂದಟ್ಟು

ಕುಂದಾಪುರ ಮಿರರ್ ಸುದ್ದಿ…
ಕೋಟ: ಗಿಡ ನಡುವ ಕಾಯಕ ಅತ್ಯಂತ ಪ್ರಶಂಸನೀಯ ಕಾರ್ಯ ಅದು ನಿರಂತರವಾಗಿಸುವ ಯೋಚನೆ ಯೋಜನೆ ಎಲ್ಲರೂ ಮಾದರಿ ಕಾರ್ಯವಾಗಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ ಪ್ರೈಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ ಇವರ ಸಹಯೋಗದೊಂದಿಗೆ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟ ಇವರ ಸಂಯೋಜನೆಯೊಂದಿಗೆ 211ನೇ ಪರಿಸರಸ್ನೇಹಿ ಅಭಿಯಾನ ಮೂರುತಿಂಗಳ ಕಾಲ ನಡೆಯುವ ಹಸಿರು ಜೀವ ಯೋಜನೆಯಲ್ಲಿ ಗಿಡ ವಿತರಿಸಿ ಮಾತನಾಡಿ ಪ್ರಕೃತಿಯನ್ನು ಪ್ರೀತಿಸುವ ಅದನ್ನು ಆರಾಧಿಸುವ ಪಂಚವರ್ಣ ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.

ಹಂದಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ಮಾತನಾಡಿ ಪ್ರತಿ ವರ್ಷ ಊರು ಕೇರಿಗಳಲ್ಲಿ ಗಿಡವನ್ನು ಕೊಂಡ್ಯೋಯ್ದು ಅಲ್ಲಿ ಪರಿಸರಸ್ನೇಹಿ ಕಾರ್ಯಕ್ರಮ ಆಚರಿಸುವ ಪಂಚವರ್ಣದ ಸಾಮಾಜಿಕ ಕಾರ್ಯ ಇತರರಿಗೆ ಸ್ಪೂರ್ತಿಯಾಗಿದೆ. ಹಸಿರಿದ್ದರೆ ಉಸಿರು ಉಳಿಯುತ್ತದೆ ಅದನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸುವಂತೆ ಕರೆ ಇತ್ತರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಮೆಸ್ಕಾಂನ ನಿವೃತ್ತ ಸಿಬ್ಬಂದಿ ಬಸವ ಪೂಜಾರಿ ಇವರಿಗೆ ಗಿಡ ವಿತರಿಸಲಾಯಿತು. ಅಲ್ಲದೆ ಪರಿಸರದ ಸಾಕಷ್ಟು ಮನೆಗಳಿಗೆ ತೆರಳಿ ಗಿಡ ವಿತರಿಸಿ ಪರಿಸರ ಜಾಗೃತಿ ಮಾಡಲಾಯಿತು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗ ಕೋಟ ಅಧ್ಯಕ್ಷೆ ರತ್ನಾ ಪೂಜಾರಿ, ಪಂಚವರ್ಣದ ಸಂಚಾಲಕ ಅಮೃತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿದರು. ಮಹಿಳಾ ಮಂಡಲದ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Comments

Leave a Reply

Your email address will not be published. Required fields are marked *

More posts

Exit mobile version