ಕುಂದಾಪುರ :ರಾಷ್ಟ್ರೀಯ ವೈದ್ಯರ ದಿನಾಚರಣೆ – ವೈದ್ಯಾಧಿಕಾರಿ ಡಾ. ಶೋಭಾ ಅವರಿಗೆ ಸಮ್ಮಾನ

0
239

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :
ಲಯನ್ಸ್ ಕ್ಲಬ್ ಕುಂದಾಪುರ ಅಮೃಧಾರಾ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಶಿ ವೈದ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಜನಪ್ರಿಯ ವೈದ್ಯರಾದ ಡಾ. ಶೋಭಾ ಅವರನ್ನ ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ನೂತನ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್ ಶಾಲು ಹೊದಿಸಿ ಫಲಪುಷ್ಷ ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಕೆ.ಎಮ್.ಸಿ. ಯ ಇಂಟರ್ನ್ ಶಿಪ್ ವೈದ್ಯರು,
ಲಯನ್ಸ್ ಕ್ಲಬ್ ಅಮೃತದಾರಾದ ನಿಕಟಪೂರ್ವ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಸರಸ್ವತಿ ಗಣೇಶ್ ಪುತ್ರನ್, ಚಂದ್ರಿಕಾ ಧನ್ಯ, ಸುಮಶ್ರೀ ಧನ್ಯ , ಸಾನ್ವಿ ಐತಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here