ಕುಂದಾಪುರ: ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ತಡೆ ಖಂಡನೀಯ – ಕುಂದಾಪುರ ಬಿಜೆಪಿ ಆಕ್ರೋಶ

0
455

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆಯಾದ ಕುಂದಾಪುರದ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡುವ ವಿಷಯದಲ್ಲಿ ತಾತ್ಕಾಲಿಕ ತಡೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ಕುಂದಾಪುರ ಮಂಡಲ ಅತ್ಯಂತ ಕಟುವಾಗಿ ಖಂಡಿಸುತ್ತದೆ ಎಂದು ಕುಂದಾಪುರ ಮಂಡಲ‌ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಸುರೇಶ್ ಶೆಟ್ಟಿ, ಎಲ್ಲಾ ಅರ್ಹತೆಯನ್ನು ಗಮನಿಸಿ ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ. ಶಿಕ್ಷಣ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಇದು ಶಿಕ್ಷಣ ಇಲಾಖೆ ಮತ್ತು ದೇಶದಾದ್ಯಂತ ಇರುವ ಶಿಕ್ಷಕರಿಗೆ ಮಾಡಿದ ಅವಮಾನ. ರಾಜ್ಯ ಸರ್ಕಾರ ಈ ಕೂಡಲೇ ತಾತ್ಕಾಲಿಕ ತಡೆಯನ್ನು ತೆಗೆದು ಹಾಕಿ ಈ ಹಿಂದೆ ಆಯ್ಕೆಯಾದ ಗೌರವಾನ್ವಿತ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here