ಕುಂದಾಪುರ ನ.10: ಸಿಪಿಎಂ ಸಮ್ಮೇಳನ

0
297

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ತಾಲೂಕು ಸರ್ವಾಂಗೀಣ ಅಭಿವ್ರದ್ಧಿಗಾಗಿ, ಸೌಹಾರ್ದ ಕುಂದಾಪುರಕ್ಕಾಗಿ ಸಿಪಿಎಂ ಪಕ್ಷದ 4 ನೇ ಕುಂದಾಪುರ ವಲಯ ಸಮ್ಮೇಳನ ನವೆಂಬರ್ 10 ರಂದು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆಯಲಿದೆ ಎಂದು ಸಿಪಿಎಂ ಪಕ್ಷದ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 07 ಮತ್ತು 08 ರಂದು ನಾಡ ಪಡುಕೋಣೆಯಲ್ಲಿ ನಡೆಯುವ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ನಡೆಯಲಿರುವ ವಲಯ ಸಮ್ಮೇಳನದಲ್ಲಿ ಸಿಪಿಎಂ ಪಕ್ಷದ ಸದಸ್ಯರು ಪ್ರತಿನಿಧಿಗಳಾಗಿ ಭಾಗವಹಿಸಿ ಹೊಸ ನಾಯಕತ್ವ ಆಯ್ಕೆ ಮಾಡಲಿದ್ದಾರೆ.

ಸಮ್ಮೇಳನದ ಧ್ವಜಾರೋಹಣ ಪಕ್ಷದ ಹಿರಿಯ ಸದಸ್ಯ ವಿ.ನರಸಿಂಹ ನೆರವೇರಿಸಲಿದ್ದಾರೆ.

ಸಮ್ಮೇಳನದ ಉದ್ಘಾಟನೆಯನ್ನು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here