ಗಂಗೊಳ್ಳಿ ನಾರಾಯಣ ಮೊಗವೀರ ಪತ್ನಿಗೆ ಡಾ.ಜಿ.ಶಂಕರ್ 1 ಲಕ್ಷ ರೂ ನೆರವು

0
250

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮೀನುಗಾರಿಕೆ ಮಾಡುವ ಸಮಯದಲ್ಲಿ ಸಮುದ್ರಕ್ಕೆ ಬಿದ್ದು ಮೃತ ಪಟ್ಟ ಗಂಗೊಳ್ಳಿ ನಿವಾಸಿ ನಾರಾಯಣ ಮೊಗವೀರ ಇವರ ಪತ್ನಿ ಸಾಧು ಇವರಿಗೆ ನಾಡೋಜ ಡಾ.ಜಿ.ಶಂಕರ್ ಅವರು ರೂ. 1ಲಕ್ಷ ಸಾಂತ್ವಾನಧನವನ್ನು ನೀಡಿದ್ದಾರೆ. ನಾರಾಯಣ ಮೊಗವೀರ ಅವರ ಮನೆಗೆ ತೆರಳಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ನೆರವನ್ನು ಹಸ್ತಾಂತರಿಸಿ ಸಾಂತ್ವನದ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ. ಎಂ. ಸುವರ್ಣ ಆರಾಟೆ, ಜಗದೀಶ್ ಮಾರ್ಕೊಂಡ್, ಸದಾನಂದ ಬಳ್ಕೂರು, ನಾಗೇಶ್ ಪಿ ಕಾಂಚನ್ ನಾಡ, ಪುಂಡಲೀಕ್ ಬಂಗೇರ, ಚಂದ್ರ ನಾಯ್ಕ್ ಕಟ್ ಬೇಲ್ತೂರು, ನಾಗರಾಜ್ ಪುತ್ರನ್ ಸುಳ್ಸೆ, ರಮೇಶ್ ಕುಂದರ್ ಕೋಟ, ರಾಜು ಮೆಂಡನ್ ತ್ರಾಸಿ, ರತ್ನ ಆರ್ ಕುಂದರ್ ಕೊಲ್ಲೂರ್, ಶ್ಯಾಮಲಾ ಜಿ ಚಂದನ್ ಸುಳ್ಸೆ, ಶ್ಯಾಮಲಾ ಕುಂದರ್ ನಾವುಂದ, ಉಮೇಶ ಬಡಾಕೆರೆ, ಸತೀಶ್ ಗುಲ್ವಾಡಿ, ಚಂದ್ರ ಮೊಗವೀರ, ಸೋಮನಾಥ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here