ಕುಂದಾಪುರ ಯೋಜನಾ ಪ್ರಾಧಿಕಾರ ಕಚೇರಿಗೆ ಪೂರ್ಣ ಅವಧಿಯ ಅಧಿಕಾರಿ ನೇಮಕ

0
391

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಾಲೂಕಿನ 45 ಗ್ರಾಮಗಳು ಮತ್ತು ಬೈಂದೂರು ತಾಲೂಕಿನ 15 ಗ್ರಾಮಗಳಿಗೆ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣಕ್ಕೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡುವ, ಕಟ್ಟಡ ನಿರ್ಮಾಣ ಪರವಾನಿಗೆಗೆ ತಾಂತ್ರಿಕ ಅಭಿಪ್ರಾಯ ನೀಡುವ ಹಾಗೂ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ತಯಾರಿಸುವ ಕರ್ತವ್ಯಕ್ಕೆ ಈ ತನಕ ನಿಯೋಚಿತಗೊಂಡಿರುವ ಅಧಿಕಾರಿ ಇತರ ದಿನಗಳಲ್ಲಿ ಅನ್ಯಕಾರ್ಯ ನಿಮಿತ್ತ ಇತರ ಕಚೇರಿಯ ಜವಾಬ್ದಾರಿ ನಿಭಾಯಿಸ ಬೇಕಿದ್ದ ಕಾರಣಕ್ಕಾಗಿ, ಕುಂದಾಪುರ ಕಚೇರಿಯಲ್ಲಿ ವಾರಕ್ಕೆ ಎರಡು ದಿನ ಮಾತ್ರವೇ ಲಭ್ಯವಿದ್ದರು. ಆ ಎಲ್ಲಾ ಕಾರಣದಿಂದಾಗಿ ಸಾರ್ವಜನಿಕ ಅರ್ಜಿ ವಿಲೇವಾರಿಗೆ, ಅಧಿಕಾರಿ ಸಮರ್ಪಕವಾಗಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರಿಗೆ ವಿಳಂಬವಾಗಿ ತೊಂದರೆಯಾಗುತ್ತಿತ್ತು. ಈ ಮೇಲಿನ ಮೂಲಭೂತ ಸಮಸ್ಯೆಗಳನ್ನು ಮನಗಂಡು ಕರ್ನಾಟಕ ಸರ್ಕಾರದಿಂದ ಇತ್ತೀಚೆಗೆ ನೇಮಕಗೊಂಡಿರುವ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹಾಗೂ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಚಂದ್ರ ಅಮಿನ್ ಮತ್ತು ಅಲ್ಫಾಜ್ ರವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ತಂದು ಕರ್ನಾಟಕ ಸರಕಾರಕ್ಕೆ ಪತ್ರ ಬರೆದು ವಿನಂತಿಸಿದ್ದರು.

ಈ ಕುರಿತು ಜಯಪ್ರಕಾಶ್ ಹೆಗ್ಡೆಯವರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮವಾಗಿ ಇದೀಗ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವು ವಾರಕ್ಕೆ ಐದು ದಿನಗಳಿಗೆ ನವೀನ್ ಜಿಎಸ್ ರವರನ್ನು ಕುಂದಾಪುರ ಕಚೇರಿಗೆ ಸದಸ್ಯ ಕಾರ್ಯದರ್ಶಿ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಲು ಅಧಿಕೃತ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here