ನಿರಂತರಗೋವುಗಳ‌ ರುಂಡ ಪತ್ತೆ ಪ್ರಕರಣ ಖಂಡಿಸಿ ಬೃಹತ್ ಪ್ರತಿಭಟನೆ :ಶಾಸಕ ಗುರುರಾಜ್ ಗಂಟಿಹೊಳೆ

0
362

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಗೋ ಹತ್ಯೆ, ಗೋ ಕಳ್ಳತನದ ನಡುವೆಯೂ ಗೋವುಗಳ ರುಂಡ ಪತ್ತೆಯಾಗುತ್ತಿರುವ ಪ್ರಕರಣಗಳು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಖಂಡಿಸಿ ಮುಂದಿನ ವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೈಂದೂರು ಕ್ಷೇತ್ರವ್ಯಾಪ್ತಿಯಲ್ಲಿ ಈವರೆಗೆ 27 ಕಡೆಗಳಲ್ಲಿ ಗೋವಿನ ರುಂಡ ಪತ್ತೆಯಾಗಿದೆ. ಇಂತಹ ವಿಕೃತ ಮೆರೆಯುವವರಿಗೆ ಕಠಿನ ಶಿಕ್ಷೆ ಆಗಲೇ ಬೇಕು. ಪೊಲೀಸರ ನಿರಂತರ ಪರಿಶ್ರಮದ ನಡುವೆಯೂ ಇಂತಹ ಘಟನೆಗಳು ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. 27 ರಂಡು ಪತ್ತೆ ಪ್ರಕರಣದಲ್ಲಿ ಶಿರೂರು ಭಾಗದಲ್ಲೇ ಅತಿ ಹೆಚ್ಚು ಪ್ರಕರಣ ಕಂಡು ಬಂದಿದೆ. ಕ್ಷೇತ್ರದ ಬೇರೆ ಬೇರೆ ಕಡೆಗಳಲ್ಲೂ ಇದು ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಶಾಶ್ವತ ಕಡಿವಾಣ ಬೀಳಲೇ ಬೇಕು. ಗೋವುಗಳ ಕಳ್ಳತನ, ಗೋಹತ್ಯೆ ಮಾಡಿ, ಗೋವಿನ ರುಂಡಗಳನ್ನು ಉದ್ದೇಶ ಪೂರ್ವಕವಾಗಿ ಹಿಂದು ದೇವಸ್ಥಾನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆದು ಹೋಗುವ ಮೂಲಕ ಹಿಂದೂಗಳ‌ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಮತ್ತು ಹಿಂದೂಗಳ ತಾಳ್ಮೆ ಕೆಡಿಸುವ ಪ್ರಯತ್ನವೂ ನಡೆಯುತ್ತಿದೆ. ಗೋವುಗಳ‌ ಮೇಲಿನ ಹಿಂಸೆ, ಗೋವುಗಳ ರುಂಡಪತ್ತೆ ಪ್ರಕರಣಗಳನ್ನು ವಿರೋಧಿಸಿ, ಖಂಡಿಸಿ ಮುಂದಿನ ವಾರ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here