ಕೋಟ :ಟೀಮ್ ಭವಾಬ್ಧಿ ಪಡುಕರೆ ಸಂಸ್ಥೆಯ ಭವಾಬ್ಧಿ 2025 ಕಾರ್ಯಕ್ರಮ, ಆಮಂತ್ರಣ ಪತ್ರಿಕೆ ಬಿಡುಗಡೆ

0
231

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಟೀಮ್ ಭವಾಬ್ಧಿ ಪಡುಕರೆ ಸಂಸ್ಥೆಯ ಭವಾಬ್ಧಿ 2025 ಕಾರ್ಯಕ್ರಮ ಮಾರ್ಚ್ 15ರಂದು ಕೋಟತಟ್ಟು ಪಡುಕರೆಯಲ್ಲಿ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ವೇಳೆ ಮಾತನಾಡಿದ ಟೀಮ್ ಭವಾಬ್ಧಿ ಪಡುಕರೆ ಅಧ್ಯಕ್ಷ ಸಂತೋಷ ನಾಲ್ಕನೆಯ ವರ್ಷದ ಸಂಭ್ರಮದ ವೇದಿಕೆಯಲ್ಲಿ ರಾಜ್ಯ ಕಂಡ ಖ್ಯಾತ ಮುಳುಗುತಜ್ಞ ಆಪತ್ಭಾಂದವ ಈಶ್ವರ್ ಮಲ್ಪೆ ಅವರಿಗೆ ಭವಾಬ್ಧಿ ಕಡಲೂರ ಸನ್ಮಾನ ನೆರವೆರಲಿದ್ದು, ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಮಂಗಳೂರು ಅಭಿನಯಿಸುವ ಪರಮಾತ್ಮ ಪಂಜುರ್ಲಿ ಕನ್ನಡ ನಾಟಕ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ವಿವಿಧ ನೃತ್ಯಾವಳಿ ಹಾಗು ಮಾರಣಕಟ್ಟೆ ಕಾರಣಿಕದ ಬಿಡುವನೆ ಬ್ರಹ್ಮಲಿಂಗ ಪ್ರಸಿದ್ಧ ನೃತ್ಯರೂಪಕ, ಸ್ಥಳೀಯ ಪ್ರತಿಭಾನ್ವಿತ ನೃತ್ಯಪಟುಗಳಿಂದ ನೃತ್ಯ ಸಿಂಚನ, ಕರಾವಳಿಯ ಹೆಸರಾಂತ ಗಾಯಕರಿಂದ ಸಂಗೀತ ರಸಮಂಜರಿ, ಪ್ರತಿಭಾ ಪುರಸ್ಕಾರ , ವಿವಿಧ ಸಾಂಸ್ಕೃತಿಕ ಹಾಗು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಕಾರ್ಯದರ್ಶಿ ಸಂದೇಶ ಅಮೀನ್, ಸದಸ್ಯರಾದ ದರ್ಶನ್ ಪೂಜಾರಿ, ದರ್ಶನ್ ಬಂಗೇರ ಹಾಗು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here