ಕುಂದಾಪುರ :ಕಾರ್ಮಿಕ ವರ್ಗದ ಹಕ್ಕುಗಳ ಪ್ರಬಲ ಪ್ರತಿಪಾದಕರು:ಡಾ ಬಿ ಆರ್ ಅಂಬೇಡ್ಕರ್

0
152

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಅಂಬೇಡ್ಕರ್ ಅವರು ಶಿಕ್ಷಣ ಪಡೆಯಿರಿ, ಸಂಘಟಿತರಾಗಿ ಹೋರಾಟ ನಡೆಸಿ ಎಂದು ಶೋಷಿತ ವರ್ಗಕ್ಕೆ ಕರೆ ನೀಡಿದವರಲ್ಲಿ ಪ್ರಮುಖರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಕೆಲವು ಬಲಪಂಥೀಯರು ತಪ್ಪುತಪ್ಪಾಗಿ ಸಮಾಜದೊಳಗೆ ಅಪಪ್ರಚಾರ ನಡೆಸುತ್ತಾ ಬರುತ್ತಿದ್ದಾರೆ ಆದರೆ ಅಂಬೇಡ್ಕರ್ ಅವರು ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಸಂವಿಧಾನ ರಚನೆ ಮಾಡಿದವರು. ದೇಶದ ಕಾನೂನು ಮಂತ್ರಿಯಾಗಿಯೂ ದೇಶದ ನಾಯಕನಾಗಿ ಮೂಡಿ ಬಂದವರು ಆದುದರಿಂದ ಅಂಬೇಡ್ಕರ್ ಎಲ್ಲರ ನಾಯಕ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಅವರು ತಲ್ಲೂರು ಮತ್ತು ಸೇನಾಪುರದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಲೇಬರ್ ಪಾರ್ಟಿ ಸ್ಥಾಪಿಸಿ ಕಾರ್ಮಿಕರ ಕಾನೂನುಗಳ ಸುಧಾರಣೆ, ಕಾರ್ಮಿಕರ ಹಕ್ಕುಗಳಿಗಾಗಿ ಕೆಲಸ ಮಾಡಿರುವುದು ಅವರು ಕಾರ್ಮಿಕ ವರ್ಗದ ಪ್ರಬಲ ಪ್ರತಿಪಾದಕರು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಇಂದು ಸರ್ಕಾರಗಳು ಇಂತಹ ಭಾರತೀಯ ಕಾರ್ಮಿಕ ಕಾನೂನುಗಳನ್ನು ದೇಶಿಯ ಹಾಗೂ ವಿದೇಶಿಯ ಕಾರ್ಪೋರೇಟ್ ಗಳಿಗೆ ಕಾರ್ಮಿಕರನ್ನು ಗುಲಾಮರಂತೆ ದುಡಿಸಲು ತಿದ್ದುಪಡಿ ಮಾಡುತ್ತಿದೆ ನೂತನ ಕಾರ್ಮಿಕ ಸಂಹಿತೆ ತರಲು ಹೊರಟಿರುವುದನ್ನು ಕಾರ್ಮಿಕ ವರ್ಗ ಸಹಿಸಲ್ಲ ಇದರ ವಿರುದ್ಧ ದೇಶದ ಹತ್ತು ಕಾರ್ಮಿಕ ಸಂಘಟನೆಗಳು ಮೇ 20 ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಲ್ಲೂರು ಕಟ್ಟಡ ಕಾರ್ಮಿಕರ ಘಟಕದ ಉಮೇಶ್, ಕೃಷ್ಣಯ್ಯ ಆಚಾರ್ಯ, ಸೇನಾಪುರ ಘಟಕದ ಪರಮೇಶ್ವರ, ಹೆರಿಯ, ಸುನೀಲ್, ಬಸವ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here