ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಸಹಸಂಸ್ಥೆಗಳ ರೈತರೆಡೆಗೆ ನಮ್ಮ ನಡಿಗೆ 12ನೇ ಆವೃತ್ತಿಯ ಆಯೋಜನೆ – ನಿಶಾ ದೇವಾಡಿಗ ಆಯ್ಕೆ

0
1264

ಕುಂದಾಪುರ ಮಿರರ್ ಸುದ್ದಿ…
ಕೋಟ:
ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ 12 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಇದೇ ಬರುವ ಭಾನುವಾರ 26 ಬೆಳಿಗ್ಗೆ 10.ಗ ನಡೆಯಲಿದೆ.

ಈ ಬಾರಿ ವಿಶೇಷವಾಗಿ ಬೇಳೂರು ಭಾಗದ ಯುವ ಮಹಿಳಾ ಕೃಷಿ ಪ್ರತಿಭೆ ನಿಶಾ ದೇವಾಡಿಗ ದೇವಸ್ಥಾನಬೆಟ್ಟು ಬೇಳೂರು ಇವರನ್ನು ಆಯ್ಕೆಗೊಳಿಸಿದ್ದು, ಸಾಧಕ ರೈತನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರಗಳನ್ನು ವಿತರಿಸಿ ಗೌರವಿಸಲಾಗುವುದು ಎಂದು ಸಂಘಟಕರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here