ಜು.6ರಂದು ಕೋಟ ಪಂಚವರ್ಣದಿಂದ ವಿನೂತ ಹಸಿರು ಜೀವ ಅಭಿಯಾನ – ಮಹಿಳಾ ಮಂಡಲದಿಂದ ಗಿಡ ನಾಟಿ ಕಾರ್ಯಕ್ರಮ

0
514

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇವರ ಸಹಭಾಗಿತ್ವದಡಿ 262ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ವಿಶಿಷ್ಟ ರೀತಿಯ ಮಹಿಳಾ ಹಸಿರು ಜೀವ ಅಭಿಯಾನ ಭಾನುವಾರ (ಜು.6ರಂದು )ಮಣೂರು ಪಡುಕರೆ ವ್ಯಾಪ್ತಿಯಲ್ಲಿ ಜರಗಲಿದೆ.
ವಿಶೇಷವಾಗಿ ಮಹಿಳಾ ಹಸಿರು ಜೀವ ಕಾರ್ಯಕ್ರಮದಲ್ಲಿ ಪಂಚವರ್ಣ ಮಹಿಳಾಮಂಡಲದ ಪದಾಧಿಕಾರಿಗಳು ಸದಸ್ಯರು ಈ ಗಿಡ ನಡುವ ,ನೀಡುವ ಕಾಯಕದಲ್ಲಿ ಪಾಲ್ಗೊಂಡು ಸ್ಥಳೀಯ ಮನೆಗಳಿಗೆ ತೆರಳಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here