ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್‍ಗಾಗಿ ಕೋಟ ದಿನೇಶ್ ಗಾಣಿಗ ನೇಪಾಳ ಪ್ರಯಾಣ

0
142

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇದೇ ಜು.26 ರಿಂದ 27 ತನಕ ನೇಪಾಳ ರಂಗಶೀಲ ಸ್ಟೇಡಿಯಂನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ಕೋಟದ ದಿನೇಶ ಗಾಣಿಗ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ವೇಗ ನಡಿಗೆ, ಗುಂಡೆಸೆತ, ಲಾಂಗ್ ಜಂಪ್‍ನಲ್ಲಿ ಭಾಗವಹಿಸಲಿದ್ದಾರೆ.

ಈ ಹಿಂದೆ ಥೈಲ್ಯಾಂಡ್‍ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನದ ಪದಕ, ಹರ್ಡಲ್ಸ್‍ನಲ್ಲಿ ದ್ವಿತೀಯ ಒಂದು ಬೆಳ್ಳಿ ಪದಕ ಮತ್ತು ವೇಗ ನಡಿಗೆಯಲ್ಲಿ ತೃತೀಯ ಕಂಚು ಪದಕ ಹಾಗೂ 2021 ಸಿಂಗಾಪುರ2022 ಮಲೇಷಿಯಾ ಹಾಗೂ2023ರಲ್ಲಿ ಶ್ರೀಲಂಕಾ ಅಂತಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್‌ ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾಗಿದ್ದಾರೆ.

 

LEAVE A REPLY

Please enter your comment!
Please enter your name here