ಕರಾಟೆಯಲ್ಲಿ ಅಪ್ರತಿಮ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಜನತಾ ಕಿರಿಮಂಜೇಶ್ವರದ ರಜತ್

0
1199

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ :ಅಗಸ್ಟ್ 20ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಸೇಂಟ್ ಫ್ರಾನ್ಸಿಸ್ ಕ್ಸೆವಿಯರ್ ಇಂಗ್ಲಿಷ್ ಮೀಡಿಯಂ ಶಾಲೆ ಉದ್ಯಾವರ ಇವರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದ ರಜತ್ ( 8ನೇ ತರಗತಿ) 14 ವರ್ಷದ ಒಳಗಿನ ವಯೋಮಿತಿಯ 50 ಕೆಜಿ ವಿಭಾಗದಲ್ಲಿ ವಿಜಯಶಾಲಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಹೆಮ್ಮೆಯ ವಿದ್ಯಾರ್ಥಿಯ ಅಭೂಪೂರ್ವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ಪ್ರಾಂಶುಪಾಲರಾದ ಗಣೇಶ ಮೊಗವೀರರವರು, ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಹಾಗೂ ಸಂಸ್ಥೆಯ ಎಲ್ಲ ಬೋಧಕ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here