ಕುಂದಾಪುರ :ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌.ಡಿ. ಎಂ. ಸಿ. ಮತ್ತು ಸರಕಾರಿ ಶಾಲೆ ಪ್ರಶಸ್ತಿ ಪುರಸ್ಕೃತ ಕೋಟ ಜಯರಾಮ ಶೆಟ್ಟಿಯವರಿಗೆ ಸಮ್ಮಾನ

0
399

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಶಾಲೆಗಳ ಬಗ್ಗೆ ಅಪಾರವಾದ ಗೌರವ, ಸಮನ್ವಯ ಕೇಂದ್ರ ವೇದಿಕೆಯ ಏಳಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ವೇದಿಕೆ ಇನ್ನಷ್ಟು ಬೆಳವಣಿಗೆಗೆ ಬೇಕಾದ ಮೂಲ ಸೌಕರ್ಯಗಳನ್ನು ದಾನಿಗಳಿಂದ ಒದಗಿಸುವಲ್ಲಿ ಮಾಡಿರುವ ಪ್ರಾಮಾಣಿಕ ಪ್ರಯತ್ನವನ್ನು ಪರಿಗಣಿಸಿ ಬ್ರಹ್ಮಾವರ ತಾಲೂಕ ಘಟಕದ ವತಿಯಿಂದ ಎಸ್. ಡಿ.ಎಂ. ಸಿ. ಸಮನ್ವಯ ಕೇಂದ್ರ ವೇದಿಕೆಯ, ಬ್ರಹ್ಮಾವರ ತಾಲೂಕು ಘಟಕದ ಕೋಶಾಧಿಕಾರಿಗಳು, ಕೋಟ ಮಣೂರು ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾಮಟ್ಟದ ಅತ್ಯುತ್ತಮ ಸರಕಾರಿ ಶಾಲೆ ಮತ್ತು ಎಸ್‌ಡಿಎಂಸಿ ಪ್ರಶಸ್ತಿ ಪುರಸ್ಕೃತ ಕೋಟ ಜಯರಾಮ ಶೆಟ್ಟಿ ಯವರನ್ನು ವೇದಿಕೆಯ ಜಿಲ್ಲಾ ಮಹಾಪೋಷಕರಾದ ಶಂಕರ್ ಐತಾಳರು ಕೋಟ ಪಡುಕೆರೆಯ ಸರಕಾರಿ ಪ್ರೌಢಶಾಲೆಯಲ್ಲಿ ಗೌರವಿಸಿ ಸನ್ಮಾನಿಸಿ, ನಿಮ್ಮ ಈ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕಾರ್ಯದರ್ಶಿ ದೀಪಾ ಮಹೇಶ್, ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಉಪಾಧ್ಯಕ್ಷರಾದ ಮಂಜುನಾಥ ಆಚಾರ್ಯ, ಸಹ ಕಾರ್ಯದರ್ಶಿ ಸವಿತಾ, ಸಂಘಟನಾ ಕಾರ್ಯದರ್ಶಿಗಳಾದ ಪವಿತ್ರ, ಕೃಷ್ಣ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಖಲೀಲ್ ಅಹಮದ್ ಕುಂದಾಪುರ, ತಾಲೂಕು ಘಟಕದ ಅಧ್ಯಕ್ಷರಾದ ಎಸ್. ವಿ. ನಾಗರಾಜ್, ಪುರಸಭಾ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್, ಕಾಪು ತಾಲೂಕು ಉಸ್ತುವಾರಿಗಳಾದ ಅಶ್ಪಾಕ್ ಮತ್ತು ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here