ಸೇತುವೆ ಮೇಲಿಂದ ಜಿಗಿದ ಯುವಕನ ರಕ್ಷಣೆ

0
920

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಸೇತುವೆ ಮೇಲಿನಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನನ್ನು ಖಾರ್ವಿ ಸಮಾಜದ ಮೀನುಗಾರರು ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ನಿನ್ನೆ ಮಧ್ಯಾಹ್ನ ಹೇರಿಕುದ್ರು ಸೇತುವೆ ಯ ಪಂಚ ಗಂಗಾವಳಿ ಹೊಳೆಯಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ 12ರ ಆಸುಪಾಸು ಕುಂದಾಪುರದ ದಿಕ್ಕಿನಿಂದ ನಡೆದುಬಂದ ಮಂಗಳೂರು ಮೂಲದ ಯುವಕ ಹೇರಿಕುದ್ರುಸೇತುವೆ ಮೇಲೆ ಬಂದು ತುಸು ಸಮಯ ಆಚೀಚೆ ಅಡ್ಡಾಡಿದ್ದಾನೆ.ನಂತರ ಕೆಲವರು ನೋಡ ನೋಡುತ್ತಲೇ ಏಕಾಏಕಿ ಸೇತುವೆಯಿಂದ ನದಿಗೆ ಹಾರಿದ್ದಾನೆ.ಅಷ್ಟರಲ್ಲಿ ಇದನ್ನು ಗಮನಿಸಿದ ದೂರದ ನದಿಯ ದಡದಲ್ಲಿದ್ದ ಮೀನುಗಾರ ಖಾರ್ವಿ ಸಮಾಜದ ಯುವಕರು ಕೂಡಲೇ ದೋಣಿ ಮೂಲಕ ಸಾಗಿ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕೊಸರಾಡುತ್ತಿದ್ದವನ್ನು ಅನಾಮತ್ತಾಗಿ ಎತ್ತಿ ದಡಕ್ಕೆ ತಲುಪಿಸಿದ್ದಾರೆ. ಯುವಕನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ್ಮಹತ್ಯೆಯ ನಿಗೂಢತೆ ಸಹಿತ ಯುವಕನ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ

LEAVE A REPLY

Please enter your comment!
Please enter your name here