ದರ್ಖಾಸ್ತು ಪೋಡಿ ಯೋಜನೆ ಅನುಷ್ಠಾನ – ರಾಜ್ಯದಲ್ಲಿ ಕುಂದಾಪುರಕ್ಕೆ 4ನೇ ಸ್ಥಾನ, ಜಿಲ್ಲೆಗೆ ಪ್ರಥಮ

0
798

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಕಂದಾಯ ಇಲಾಖೆ ಕಂದಾಯ ಗ್ರಾಮಗಳ ಹಕ್ಕುಪತ್ರ ದರ್ಖಾಸ್ತು ಪೋಡಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕುಗಳ ಪೈಕಿ ಕುಂದಾಪುರ ಒಂದೆನಿಸಿದೆ.

ರಾಜ್ಯದ 236 ತಾಲೂಕುಗಳ ಪೈಕಿ 15 ತಾಲೂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಗುರುತಿಸಿದ್ದು, ರಾಜ್ಯದಲ್ಲಿಯೇ ಕುಂದಾಪುರ ತಾಲೂಕು 4ನೇ ಸ್ಥಾನ ಗಳಿಸಿ, ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹೆಚ್ಚಿನ ಪ್ರಗತಿ ಸಾಧಿಸಿರುವುದರಿಂದ ಕಂದಾಯ ಆಯುಕ್ತರು ಕುಂದಾಪುರ ತಾಲೂಕು ಆಡಳಿತದ ಅಧಿಕಾರಿ/ ತಾಂತ್ರಿಕ ಸಿಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ 2,172 ಸರ್ವೇ ನಂಬಗಳ ಪೈಕಿ 8,103 ಖಾತೆದಾರರಿಗೆ, ಖಾತೆದಾರರಿಂದ ಯಾವುದೇ ದಾಖಲೆಗಳನ್ನು ಪಡೆಯದೆ, ತಂತ್ರಾಂಶದ ಮೂಲಕ ಅನುಬಂಧ 1 ನ್ನು ನೀಡಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಲಾಗಿದೆ.

LEAVE A REPLY

Please enter your comment!
Please enter your name here