ವಂಡ್ಸೆ :ಅಡಿಕೆಕೊಡ್ಲು ರಸ್ತೆ ಕಾಂಕ್ರೇಟಿಕರಣಕ್ಕೆ ಗುದ್ದಲಿ ಪೂಜೆ

0
462

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಅನುದಾನದ ಅಲಭ್ಯತೆಯ ನಡುವೆಯೂ ಪ್ರಮುಖ ಅವಶ್ಯಕತೆಗಳಿಗೆ ಅನುದಾನ ಹೊಂದಿಸಿಕೊಡಲಾಗುತ್ತಿದೆ. ಈ ಭಾಗದ ಮೂಲಭೂತ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಅವಶ್ಯಕ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿಕೊಡಲಾಗುವುದು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಕೆಕೊಡ್ಲು ರಸ್ತೆ ಕಾಂಕ್ರೇಟಿಕರಣಕ್ಕೆ ಶಾಸಕರ ಅನುದಾನದಲ್ಲಿ ರೂ.10 ಲಕ್ಷ ರೂ. ಮಂಜೂರಾಗಿದ್ದು, ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಕೆ ಶಿವರಾಮ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕಕುಮಾರ್ ಶೆಟ್ಟಿ, ವೆಂಕಟೇಶ ಶೆಟ್ಟಿ ಅಬ್ಬಿ, ನಿರ್ಮಲ ವಂಡ್ಸೆ, ಸ್ಥಳೀಯ ಬೂತ್ ಅಧ್ಯಕ್ಷ ಗಣೇಶ ದೇವಾಡಿಗ, ಪಾರ್ವತಿ ಗಾಣಿಗ, ನಿತಿನ್ ಶೆಟ್ಟಿ, ಮಂಜುನಾಥ ಗಾಣಿಗ, ನಿವೃತ್ತ ಕೃಷಿ ಅಧಿಕಾರಿ ಸುಧಾಕರ ಶೆಟ್ಟಿ, ಚಂದ್ರ ದೇವಾಡಿಗ, ರಾಜೀವ ಶೆಟ್ಟಿ, ಗಿರಿಜಾ ಗಾಣಿಗ, ಗುಲಾಬಿ ಶೆಟ್ಟಿ, ಮಂಜುನಾಥ ಪೂಜಾರಿ, ನಾಗೇಂದ್ರ ಗಾಣಿಗ, ನಿತಿನ್, ರಮೇಶ ಪೂಜಾರಿ ಬಳಗೇರಿ, ರುಕ್ಮಿಣಿ ಗಾಣಿಗ, ನಾರಾಯಣ ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಗೌರವಿಸಲಾಯಿತು. ಪುರೋಹಿತರಾದ ಸುರೇಶ ಐತಾಳ್ ಧಾರ್ಮಿಕ ವಿಧಾನ ನೆರವೇರಿಸಿದರು.
ಈ ರಸ್ತೆ ಅಡಿಕೆಕೊಡ್ಲು, ವಾಲಿಕೆರೆ ಮೂಲಕ ವಂಡ್ಸೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಇದು ವರ್ತುಲ ರಸ್ತೆಯಾಗಿದ್ದು, ಈ ರಸ್ತೆಯನ್ನು ಪೂರ್ಣಪ್ರಮಾಣದಲ್ಲಿ ಕಾಂಕ್ರೇಟಿಕರಣ ಮಾಡಿದರೆ ಈ ಭಾಗದ ನೂರಾರು ಜನರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

LEAVE A REPLY

Please enter your comment!
Please enter your name here