ಕೋಡಿ ಕನ್ಯಾಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಹಾಗೂ ಪಕ್ಷ ಸಂಘಟನೆಯ ಕಾರ್ಯಕ್ರಮದಲ್ಲಿ ಶಾಸಕ ಎ ಕಿರಣ್ ಕೊಡ್ಗಿ ಭಾಗಿ

0
491

ಕುಂದಾಪುರ ಮಿರರ್ ಸುದ್ದಿ…

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟ ಮಹಾಶಕ್ತಿ ಕೇಂದ್ರದ ಕೋಡಿ ಕನ್ಯಾನದಲ್ಲಿ ಬಿಜೆಪಿ ಶಕ್ತಿಯ ಕೇಂದ್ರದ ಪುನರಚನೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಕೋಡಿ ಕನ್ಯಾಣದ ಶ್ರೀರಾಮ ಮಂದಿರದ ಮುಂಭಾಗದ ಸಭಾಂಗಣದಲ್ಲಿ ಜರುಗಿತು.
ಪಕ್ಷ ಸಂಘಟನೆ ಹಾಗೂ ಶಕ್ತಿ ಕೇಂದ್ರದ ಪ್ರಮುಖ ಮತ್ತು ಸಹ ಪ್ರಮುಖ ಆಯ್ಕೆ ಪ್ರಕ್ರಿಯು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಮತ್ತು ಕ್ಷೇತ್ರ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ ಎಸ್ ಕೋಟ ಮಹಾಶಕ್ತಿ ಅಧ್ಯಕ್ಷ ಸುರೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಕೋಡಿಕನ್ಯಾನ ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಕುಂದರ್,ಕಾರ್ಯದರ್ಶಿ ಸುಧೀರ್ ಕುಂದರ್,ಹಾಗೂ. ಪಕ್ಷದ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here