ಕಥೋಲಿಕ್ ಸಭಾ ಕುಂದಾಪುರ ಘಟಕ ಸಮಿತಿಯ ನೂತನ ಅಧ್ಯಕ್ಷರಾಗಿ ಆಶಾ ಕರ್ವಾಲ್ಲೊ ಆಯ್ಕೆ

0
116

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಥೋಲಿಕ್ ಸಭಾ ಕುಂದಾಪುರ ಘಟಕ ಸಮಿತಿಯ 2026-2027 ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ಹೋಲಿ ರೋಜರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಆಶಾ ಕರ್ವಾಲ್ಲೊ ರವರು ಸರ್ವಾನುಮತಿಯಿಂದ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷರಾಗಿ ವಿಲ್ಸನ್ ಅಲ್ಮೇಡಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ಶಾಂತಿ ಬರೆಟ್ಟೊ, ಸಹ ಕಾರ್ಯದರ್ಶಿಯಾಗಿ ವಾಲ್ಟರ್ ಡಿಸೋಜ, ಕೋಶಾಧಿಕಾರಿಯಾಗಿ ಶೈಲಾ ಅಲ್ಮೇಡಾ, ಸಹ ಕೋಶಾಧಿಕಾರಿಯಾಗಿ ಆಲ್ವೀನ್ ಅಲ್ಮೇಡಾ, ಸಂದೇಶ ಪತ್ರಿಕೆ ಸಂಯೋಜಕರಾಗಿ ವೈಲೆಟ್ ಡಿಸೋಜ, ರಾಜಕೀಯ ಸಂಚಾಲಕರಾಗಿ ಮೈಕಲ್ ಗೊನ್ಸಾಲಿಸ್, ಸರಕಾರಿ ಸೌಲಭ್ಯಗಳ ಸಂಯೋಜಕರಾಗಿ ವಿನೋದ್ ಕ್ರಾಸ್ಟೋ ಆಯ್ಕೆಯಾದರು.

ಕಥೋಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷರಾದ ರೇಮಿ ಫರ್ನಾಂಡೀಸ್ ರವರು ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.

LEAVE A REPLY

Please enter your comment!
Please enter your name here