ಕೋಟ ದೇಗುಲದಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ

0
124

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪುರಾಣ ಪ್ರಸಿದ್ಧ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಮಾರ್ಚ 1ರಂದು ನಡೆಯಲಿರುವ ಏಕ: ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಹೊರೆಕಾಣಿಗೆ ಪ್ರಾರಂಭಗೊಂಡಿದ್ದು, ಈ ಹಿನ್ನಲ್ಲೆಯಲ್ಲಿ ಶ್ರೀ ದೇಗುಲದಲ್ಲಿ ಹೊರೆಕಾಣಿಕೆ ಸಮರ್ಪಿಸುವ ಕಾರ್ಯಕ್ಕೆ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಚಾಲನೆ ನೀಡಿದರು.

ಕೋಟದ ಜನತಾ ಫಿಶ್ ಮಿಲ್ ಸಂಸ್ಥೆಯು ಬಹೃತ್ ಮೆರವಣಿಗೆಯ ಮೂಲಕ ಹೊರೆಕಾಣಿಕೆಗೆ ಮೊದಲು ದೇಗುಲಕ್ಕೆ ಅರ್ಪಿಸಿದರು. ಶ್ರೀ ದೇಗುಲದಲ್ಲಿ ಅರ್ಚಕ ಅರವಿಂದ ಜೋಗಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿಕೊಂಡು ಹಸಿರು ಹೊರೆಕಾಣಿಕೆಯನ್ನು ಉಗ್ರಾಣಕ್ಕೆ ಕೊಂಡ್ಯೋಯಲಾಯಿತು.

ಈ ಸಂದರ್ಭದಲ್ಲಿ ಜನತಾ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಎ ಕುಂದರ್,ದಿವ್ಯಲಕ್ಷ್ಮೀ ಪಿ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ವ್ಯವಸ್ಥಾಪಕರಾದ ಶ್ರೀನಿವಾಸ್ ಕುಂದರ್, ಮಿಥುನ್ ಕುಮಾರ್, ಗೀತಾನಂದ ಸಮಾಜಕಾರ್ಯದ ರವಿ ಕಿರಣ್ ಕೋಟ, ದೇಗುಲದ ಟ್ರಸ್ಟಿಗಳು, ವ್ಯವಸ್ಥಾಪಕರು, ಸಿಬ್ಬಂದಿವರ್ಗ, ಗ್ರಾಮಸ್ಥರು, ಜನತಾ ಸಿಬ್ಬಂದಿ ವರ್ಗ, ಅರ್ಚಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here