ಕುಂದಾಪುರ :ಸಮಾಜ ಸೇವಕ, ಗಾಣಿಗ ಸಂಘದ ಮಾಜಿ ಅಧ್ಯಕ್ಷ, ಹಕ್ಕೋತ್ತಾಯದ ಕಾರ್ಯಕರ್ತ ಶ್ರೀನಿವಾಸ ಗಾಣಿಗ ನಿಧನ

0
315

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ನಮ್ಮ ಭೂಮಿ ಕನ್ಯಾನ ಇದರ ಸಕ್ರಿಯ ಕಾರ್ಯಕರ್ತ, ಕುಂದಾಪುರ ತಾಲೂಕು ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಕನ್ಯಾನ (68ವ) ರಸ್ತೆ ಅಪಘಾತದಲ್ಲಿ ಮಾ.24ರ ರಾತ್ರಿ ನಿಧನರಾದರು.
ಮಂಗಳವಾರ ರಾತ್ರಿ ಏಳುವರೆ ಸುಮಾರಿಗೆ ಕುಂದಾಪುರದಿಂದ ತನ್ನ ಮನೆಯತ್ತ ಬೈಕ್‍ನಲ್ಲಿ ಹೊರಟಿದ್ದರು. ತಲ್ಲೂರು ಪ್ರವಾಸಿ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿರುವಾದ ಎದುರುಗಡೆ (ರಾಂಗ್ ಸೈಡ್)ಯಿಂದ ಬರುತ್ತಿರುವ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದ ಶ್ರೀನಿವಾಸ ಗಾಣಿಗರ ತಲೆಗೆ ಗಂಭೀರ ಗಾಯವಾಗಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.
ನಮ್ಮ ಭೂಮಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಪಂಚಾಯತ್ ರಾಜ್ ಹಕ್ಕೋತ್ತಾಯ ಆಂಧೋಲನದಲ್ಲಿ ಗುರುತಿಸಿಕೊಂಡಿದ್ದರು. ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ಮತದಾರರ ಜಾಗೃತಿ, ವಿವಿಧ ಮಾಹಿತಿ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಪಂಚಾಯತ್ ರಾಜ್ ವಿಷಯದಲ್ಲಿ ರಾಜ್ಯಾದ್ಯಂತ ತಿರುಗಾಟ ಮಾಡಿದ್ದರು.
ಮೃತರು ಪತ್ನಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಲಿತಾ ಶ್ರೀನಿವಾಸ ಗಾಣಿಗ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here