ಡಾ. ಆತ್ಮ ಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

ಇದೊಂದು ಮಹಾನ್ ಗ್ರಂಥ ಎಂದು ಹೊಗಳಿದ ಡಾ. ಸಿ.ಎನ್. ಮಂಜುನಾಥ

ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು :ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ, ಕ್ಯಾನ್ಸರ್ ಪೀಡಿತರನ್ನು ಶುಶ್ರೂಷೆ ಮಾಡುವ ವೈದ್ಯರು ಹಾಗೂ

ನರ್ಸ್ ಗಳಿಗೆ ಈ ಪುಸ್ತಕ ಒಂದು ಮಹಾನ್ ಗ್ರಂಥ ಆಗಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯರು ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ. ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದ ಡಾ. ಆತ್ಮ ಪ್ರಸನ್ನ ಸಂಪಾದಿತ ಕೃತಿ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಇಂದಿಗೂ ಪ್ಯಾಲಿಟಿವ್ ಕೇರ್ ಒಂದು ಸರಿಯಾದ ರೀತಿಯಲ್ಲಿ ವಿನ್ಯಾಸ ಆಗಿಲ್ಲ. ಇಂತಹ ಸಂದರ್ಭದಲ್ಲಿ ಈ ಅಪರೂಪದ ಕೃತಿ ಬಿಡುಗಡೆ ಆಗುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದರು. ಕೆಲವು ಬಗೆಯ ಕ್ಯಾನ್ಸರ್ ಗಳು ಸಂಪೂರ್ಣ ವಾಸಿ ಆಗುವುದಿಲ್ಲ. ಆಗ ಅಂತಹವರ ಬದುಕುವ ಗುಣಮಟ್ಟವನ್ನು ನಾವು ಹೆಚ್ಚಿಸಬೇಕು. ಈ ಪುಸ್ತಕದಲ್ಲಿ ನೂರೊಂದು ಅಧ್ಯಾಯ ಇದೆ ಇದರಿಂದ ಕ್ಯಾನ್ಸರ್ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಕ್ಯಾನ್ಸರ್ ಕಡೇ ಹಂತದಲ್ಲಿ ಇರುವವರನ್ನು ನಾವು ಹೇಗೆ ನೋಡಿಕೊಳ್ಳಬೇಕು, ಅವರ ಆತ್ಮವಿಶ್ವಾಸ ಹೇಗೆ ಹೆಚ್ಚಿಸಬೇಕು ಎಂದು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ ಎಂದು ಪುಸ್ತಕ ಕುರಿತು ವಿವರಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಆತ್ಮ ಪ್ರಸನ್ನ ಅವರ ಪತ್ನಿ ಡಾ.. ಮಿತಾ ಪ್ರಸನ್ನ ಅವರು ಆತ್ಮ ಪ್ರಸನ್ನ ಅವರ ಜೀವನ ಪರಿಚಯಿಸುವ ಜೊತೆ ಈ ಪುಸ್ತಕದ ಆಳ ಅಗಲವನ್ನು ವಿವರಿಸಿದರು.
ಪ್ಮಾಲಿಟಿವ್ ಕೇರ್ ಕುರಿತು ಈ ಪುಸ್ತಕದಲ್ಲಿ ಭಾರತದ ಶ್ರೇಷ್ಠ ವೈದ್ಯರುಗಳು ವಿವರಿಸಿರುವ ಅನೇಕ ಅಂಶಗಳು ಇವೆ ಎಂದು ಹೇಳಿದ ಶಂಕರ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಾಥ್ ಇಂತಹಾ ಶ್ರೇಷ್ಠ ಕೃತಿ ಪ್ರಕಟಿಸುವುದು ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *

More posts

Exit mobile version