ಕುಂದಾಪುರದಲ್ಲಿ ಎ.9ರಿಂದ 12ರ ತನಕ ಕೃಷಿಮೇಳ ಹಾಗೂ ಆಹಾರ ಮೇಳ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ 3ನೇ ವರ್ಷದ ಕೃಷಿ ಮೇಳ ಹಾಗೂ ಆಹಾರ ಮೇಳ ಎಪ್ರಿಲ್ 9 ಗುರುವಾರದಿಂದ ಎಪ್ರಿಲ್ 12 ಆದಿತ್ಯವಾರದ ತನಕ ಕುಂದಾಪುರದ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷರಾದ ಡಾ.ನಾಗರಾಜ ಕೌಲಗಿ ತಿಳಿಸಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೃಷಿ ಹಾಗೂ ಆಹಾರೋತ್ಪನ್ನಗಳ ಮಳಿಗೆಗಳು, ಹಲಸು, ಮಾವು ಮೊದಲಾದ ಹಣ್ಣಿನ ಮಳಿಗೆಗಳು, ವಿವಿಧ ಹಣ್ಣು ಹೂವು ಅಲಂಕಾರಿಕ ಗಿಡಗಳು, ತರಕಾರಿ ಬೀಜಗಳ ಮಾರಾಟ ಮಳಿಗೆಗಳು ಆಗಮಿಸಲಿವೆ. ಈಗಾಗಲೇ ಎರಡು ಯಶಸ್ವಿ ಕೃಷಿ ಮೇಳವನ್ನು ಕುಂದಾಪುರದಲ್ಲಿ ಆಯೋಜಿಸಿದ್ದು ಇದು ಮೂರನೇ ಕೃಷಿ ಮೇಳ, ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದರು.
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ ಕಿರಣ್ ಕುಂದಾಪುರ ಮಾತನಾಡಿ, ವಿಶೇಷವಾಗಿ ಈ ವರ್ಷ ಹೈದರಬಾದ್ ನಿಂದ ಹಲಸು ಬರಲಿದೆ. ಬೇರೆ ಬೇರೆ ಹಣ್ಣು ಮಾರಾಟಗಾರರು, ಕೃಷಿಕರು ಮಳಿಗೆ ತೆರೆಯಲಿದ್ದಾರೆ. ಹಲಸಿನ ಹಣ್ಣಿನ ಮೌಲ್ಯವರ್ದಿತ ಉತ್ಪನ್ನಗಳ ಮಾರಾಟ, ಹಲಸಿನ ಹಣ್ಣಿನ ವಿವಿಧ ಖಾಧ್ಯಗಳು ಆಹಾರ ಪ್ರಿಯರ ಗಮನ ಸಳೆಯಲಿದೆ ಎಂದರು.
120 ಮಳಿಗೆಗಳಿಗೆ ಅವಕಾಶ ಮಾಡಲಾಗಿದ್ದು, ಈಗಾಗಲೇ 90 ಮಳಿಗೆಗಳು ನೊಂದಣಿ ಮಾಡಿಕೊಂಡಿವೆ. ಎಲ್ಲ ಮಳಿಗೆಗಳು ಪ್ರತ್ಯೇಕ ಪ್ರತ್ಯೇಕ ಉತ್ಪನ್ನಗಳ ಮಾರಾಟ ಮಳಿಗೆÀಳಾಗಿರುತ್ತವೆ. ರಾಜ್ಯದ ಬೇರೆ ಬೇರೆ ಭಾಗದಿಂದ ಕೃಷಿ, ಹಣ್ಣು, ಆಹಾರ, ಇತರ ವಸ್ತುಗಳ ಮಾರಾಟ ಮಳಿಗೆಗಳು ಭಾಗವಹಿಸಲಿವೆ. ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳ ಹಾಗೂ ಹಲಸು, ಆಹಾರ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ದಿನಕರ ಶೆಟ್ಟಿ, ಕಾರ್ಯದರ್ಶಿ ಸುನೀಲ್ ಖಾರ್ವಿ ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *

More posts

Exit mobile version