ದ್ವಿತೀಯ ಪಿಯು ಫಲಿತಾಂಶ -ಜನತಾ ಪಿಯು ಕಾಲೇಜ್ ಹೆಮ್ಮಾಡಿ:ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ -15 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಫರ್

0
2313

ಕುಂದಾಪುರ ಮಿರರ್ ಸುದ್ದಿ…

ಹೆಮ್ಮಾಡಿ :2025 – 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಕೇವಲ 45% ನಿಂದ ಹಿಡಿದು 50%, 55%, 60% ಅಂಕ ಪಡೆದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಕಾಲೇಜು ಪ್ರಾರಂಭದಿಂದ ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ . 15ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ -, ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597,ಅಕ್ಷತಾ ವೀರಣ್ಣ 596,ಪ್ರಜ್ಞಾ ಎಸ್ ಪೂಜಾರಿ 594,ಇಂಚರಾ ಅಶೋಕ್ 594,ಮಾನ್ಯ 592,ಪ್ರಸಾದ್ ಪೂಜಾರಿ 591,ಸ್ಮೃತಿಕಾ 590,
ವಾಣಿಜ್ಯ ವಿಭಾಗದಲ್ಲಿ ಶಮ್ಯ ಶೆಟ್ಟಿ 597,, ಪ್ರಥಮ ಕಾಂಚನ್ 596, ಸುಚಿತ್ರ 595,ಅನ್ವಿತಾ 594,ಸಾನಿಕಾ 593,ರನ್ಮಯ್ 592,ಪ್ರೀತನ್ 591,ಕಲ್ಪಿತಾ 592 ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಾಂಶುಪಾಲರಾದ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಶೇಕಡಾ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85.90 ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ.

ರಶ್ಮಿ ಪೈ ರಾಜ್ಯಕ್ಕೆ ದ್ವಿತೀಯ ರಾಂಕ್
ಎಸ್.ಎಸ್.ಎಲ್.ಸಿ ತನಕ ಸರಕಾರಿ ಶಾಲೆಯಲ್ಲಿ ಓದಿದ್ದ ಇವರು ಪಿಯುಸಿಯನ್ನು ಹೆಮ್ಮಾಡಿಯ ಜನತಾ ಕಾಲೇಜಿನಲ್ಲಿ ಮುಂದುವರಿಸಿದ್ದರು. ಇದೀಗ ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿ.
ಪದವಿ ಪೂರ್ವ ಶಿಕ್ಷಣ ದಲ್ಲಿ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಪಾಠ ಪ್ರವಚನ ಜೊತೆಗೆ ಹೆತ್ತವರ ಪ್ರೋತ್ಸಾಹ ನನ್ನ ಸಾಧನೆಗೆ ದಾರಿದೀಪವಾಗಿದೆ ಎನ್ನುತ್ತಾಳೆ ರಶ್ಮಿ ಪೈ.

LEAVE A REPLY

Please enter your comment!
Please enter your name here