ಡಾ.ಕೋಟ ಶಿವರಾಮ ಕಾರಂತ ಕಲಿತ ಶಾಲೆಯ ಪುಟಾಣಿಗಳಿಗೆ ಪುಷ್ಭಾರ್ಚನೆಗೈದು ಬರಮಾಡಿಕೊಳ್ಳಲಾಯಿತು.

0
824

ಕುಂದಾಪುರ ಮಿರರ್ ಸುದ್ದಿ…

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಪ್ರಾಥಮಿಕ ವಿದ್ಯಾಭ್ಯಾಸಗೈದ 118ವರ್ಷ ಇತಿಹಾಸ ಹೊಂದಿರು ಕೋಟತಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾರಂಭದ ಮೊದಲ ದಿನದ ಅಂಗವಾಗಿ ಶಿಕ್ಷಕ ವೃಂದ ಪುಷ್ಭಾರ್ಚನೆಗೈದು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.

ಶಾಲೆಯ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಪುಟಾಣಿ ವಿದ್ಯಾರ್ಥಿಗಳಿಗೆ ಸಹಿತಿಂಡಿ ನೀಡಿ ಶಾಲಾರಂಭದ ಮಹತ್ವ ಸಾರಿದರು.

ಪುಟಾಣಿ ವಿದ್ಯಾರ್ಥಿಗಳು ಘೋಷವಾಕ್ಯ ಮೊಳಗಿಸಿಕೊಂಡು ಶಾಲಾ ಕೊಠಡಿಗೆ ತೆರಳಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಹಾಲಕ್ಷ್ಮೀ ಉರಾಳ, ಶಾಲಾ ಶಿಕ್ಷಕರಾದ ಪುಷ್ಭಾಲತಾ,ರೋಬಿ ಪಿಂಟೋ,ರಂಜಿತಾ,ವಿನಯ್ ಕುಮಾರ್,ಶಾಲಾ ಎಸ್ ಡಿ ಎಂಸಿ ಸದಸ್ಯೆ ವಸಂತಿ ಉಮೇಶ್,ಆನಂದ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here