ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕ್ರಿಯಾಶೀಲ ಹಸಿರು ಕ್ರಾಂತಿಯ ಪರಿಸರಸ್ನೇಹಿ ಸಂಘಟನೆಯಾದ ಕೋಟದ ಪಂಚವರ್ಣ ಸಂಘಟನೆಯ ಪ್ರತಿವರ್ಷದ ಜೂನ್ ನಿಂದ ಅಗಸ್ಟ್ ವರೆಗೆ ನಡೆಯುವ ಹಸಿರು ಹೆಜ್ಜೆ ಶೀರ್ಷಿಕೆ ಕಾರ್ಯಕ್ರಮಕ್ಕೆ ಕೋಟದ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ 100ಕ್ಕೂ ಅಧಿಕ ಪಾರಿಜಾತ ಗಿಡವನ್ನು ಶುಕ್ರವಾರ ಹಸ್ತಾಂತರಿಸಿತು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ನಿರ್ದೇಶಕ ತಿಮ್ಮ ಪೂಜಾರಿಯವರು ಪಂಚವರ್ಣ ಅಧ್ಯಕ್ಷ ಕೆ. ಮನೋಹರ್ ಪೂಜಾರಿಯವರಿಗೆ ಗಿಡವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಸದಸ್ಯರಾದ ಕೇಶವ ಆಚಾರ್, ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಸಹಕಾರಿ ಸಂಘದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.