ಕೊರವಡಿ: ಪಂಚವರ್ಣ ಸಂಘಟನೆಯ ಹಸಿರು ಹೆಜ್ಜೆ ಯೋಜನೆಗೆ ಚಾಲನ |ಹಸಿರು ಅಭಿಯಾನ ಪ್ರತಿಭಾಗದಲ್ಲೂ ನಡೆಯಲಿ- ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ

0
60

ಕುಂದಾಪುರ ಮಿರರ್ ಸುದ್ದಿ…

ಕೋಟ: ಪ್ರಸ್ತುತ ತಾಪಮಾನಕ್ಕೆ ಇಡೀ ಮನುಕುಲ ಕಂಗೆಟ್ಟು ಕೂರುವಂತ್ತಾಗಿದೆ. ಇದಕ್ಕೆ ಕಾರಣಿಕರ್ತರು ನಾವುಗಳೆ ಏಕೆಂದರೆ ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಹಸಿರನ್ನೆ ಮರೆತುಬಿಟ್ಟದ್ದೇವೆ. ಈ ದಿಸೆಯಲ್ಲಿ ಪ್ರತಿ ಭಾಗದಲ್ಲೂ ಹಸಿರು ಅಭಿಯಾನಗಳು ರೂಪುಗೊಳ್ಳಬೇಕು. ತನ್ಮೂಲಕ ವಾತಾವರಣ ವೈಪರೀತ್ಯಗಳನ್ನು ತಡೆಯುವ ಕಾರ್ಯ ಮಾಡಬೇಕಿದೆ ಎಂದು ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ ನುಡಿದರು.

ಪರಿಸರಪ್ರೇಮಿ ಕೊರವಡಿ ಶ್ವೇತ ಶ್ರೀನಿಧಿ ಉಪಾಧ್ಯಾಯರ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪೇತ್ರಿ ಅನ್ನಪೂರ್ಣ ನರ್ಸರಿ, ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಹಸಿರು ಹೆಜ್ಜೆ ಹಸಿರು ಉಸಿರಿನ ಹೆಜ್ಜೆಯ ಪಥ, ಪಂಚವರ್ಣದ ಪ್ರಕೃತಿ ರಥ ಶೀರ್ಷಿಕೆಯಡಿ 304ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಪಂಚವರ್ಣದ ಪ್ರಕೃತಿ ಆರಾಧನೆ ಅತ್ಯಂತ ಮುಕ್ತ ಕಂಠದಿಂದ ಶ್ಲಾಘಿಸಿದರು.

ಪರಿಸರಪ್ರೇಮಿ ಉಪಾಧ್ಯಾ ಮನೆತನಕ್ಕೆ ಸರ್ಮಪಣೆ
ಪಂಚವರ್ಣದ ಹಸಿರು ಹೆಜ್ಜೆ ಮೂರು ತಿಂಗಳುಗಳ ಕಾಲ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಆಯೋಜನೆಗೊಳ್ಳಲಿದ್ದು, ಈ ಹಿನ್ನಲ್ಲೆಯಲ್ಲಿ ಸೋಮವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಸರಪ್ರೇಮಿ ಶ್ವೇತಾ ಶ್ರೀನಿಧಿ ಉಪಾಧ್ಯಾಯರ ಪುತ್ರಿ ಸಿರಿ ಶ್ರೀ ಉಪಾಧ್ಯಾಯರಿಗೆ ಪಂಚವರ್ಣ ಸಂಘಟನೆ ಸಮರ್ಪಿಸಿಕೊಂಡಿತು.

ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಪಾರಿಜಾತ ಹಾಗೂ ಲಕ್ಷ್ಮಣಫಲ ಗಿಡವನ್ನು ನೆಟ್ಟು ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಲಾಯಿತು.

ಶತಾಯುಷಿ ವಿಷ್ಣುಮೂರ್ತಿ ಹತ್ವಾರ್ ಚಾಲನೆ
ಗಿಡ ನಡುವ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಶತಾಯುಷಿ ನಿವೃತ್ತ ಶಿಕ್ಷಕ ವಿಷ್ಣುಮೂರ್ತಿ ಹತ್ವಾರ್ ಗಿಡ ನಡುವ ಮೂಲಕ ಚಾಲನೆ ನೀಡಿದರು.

ಪ್ರತಿಜ್ಞಾವಿಧಿ ಭೋದನೆ
ಮನೆ ಮನೆಗೆ ಪಾರಿಜಾತ ಮತ್ತು ಲಕ್ಷ್ಮಣಫಲ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಈ ಅಭಿಯಾನದಲ್ಲಿ ಪರಿಸರ ಜಾಗೃತಿಯ ಬಿತ್ತಿಪತ್ರವನ್ನು ಋಷಿರಾಜ್ ಸಾಸ್ತಾನ ಬಿಡುಗಡೆಗೊಳಿಸಿದರು.ಅಲ್ಲದೆ ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪ್ರತಿಜ್ಞಾ ವಿಧಿ ಭೋಧಿಸಿ ನೆರಿದ್ದ ಮಕ್ಕಳಿಗೆ ಪರಿಸರ ಜಾಗೃತಿ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ನಿವೃತ್ತ ಶಿಕ್ಷಕ ರಾಮಚಂದ್ರ ಉಪಾಧ್ಯಾಯ ಕೊರವಡಿ, ಕಸ್ತೂರಿ ಆರ್ ಉಪಾಧ್ಯಾಯ, ರೋಟರಿ ಸಮುದಾಯ ದಳ ಕೊರವಡಿ ಕಾರ್ಯದರ್ಶಿ ಗಣೇಶ್ ಭಟ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗ್ರಾಮದ ಪ್ರಮುಖರಾದ ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಸದಸ್ಯರಾದ ಪ್ರಭಾಕರ್ ಮಣೂರು ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ಕಾರ್ಯಕ್ರಮಕ್ಕೆ ಸಮುದ್ಯತಾ ಗ್ರೂಪ್ಸ್ ಕೋಟ, ಕೋಟ ಸಿ ಎ ಬ್ಯಾಂಕ್, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಗೆಳೆಯರ ಬಳಗ ಕಾರ್ಕಡ, ಜೆಸಿಐ ಕೋಟ ಸಿನಿಯರ್ ಲಿಜನ್, ಕೋಟತಟ್ಟು ಗ್ರಾಮಪಂಚಾಯತ್, ಸಾಲಿಗ್ರಾಮ ಪಟ್ಟಣಪಂಚಾಯತ್, ಕೋಡಿ , ತೆಕ್ಕಟ್ಟೆ ಪಂಚಾಯತ್, ಪಾಂಡೇಶ್ವರ, ಐರೋಡಿ ಪಂಚಾಯತ್ ಸಹಕಾರ ನೀಡಿತು.

LEAVE A REPLY

Please enter your comment!
Please enter your name here