ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕಳೆದ 38ವರ್ಷಗಳಿಂದ ರಾಜ್ಯದ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕುಂದಾಪುರ ಪುರಸಭೆಯ ವ್ಯವಸ್ಥಾಪಕರಾಗಿ ವಯೋ ನಿವೃತ್ತಿ ಹೊಂದಿರುವ ಜಿ.ಸೂರ್ಯಕಾಂತ ಖಾರ್ವಿ ದಂಪತಿಯನ್ನು ಪುರಸಭೆಯಲ್ಲಿ ಸಮ್ಮಾನಿಸಿ,ಹರಸಿ ಬೀಳ್ಕೊಡಲಾಯಿತು. ಜರಗಿದ ಸರಳ ವಿದಾಯ ಸಮಾರಂಭದಲ್ಲಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಸಹಿತ ಮಾಜಿ ಸದಸ್ಯರುಗಳಾದ ದೇವಕಿ ಸಣ್ಣಯ್ಯ, ವಿ.ಪ್ರಭಾಕರ ಸೇರಿದಂತೆ ನಾಮನಿರ್ದೇಶಿತ ಸದಸ್ಯರು, ಪುರಸಭೆಯ,ಅಧಿಕಾರಿ ಸಿಬ್ಬಂದಿ ವರ್ಗ, ಪೌರ ಕಾರ್ಮಿಕರು ಹಾಗೂ ಸೂರ್ಯಕಾಂತ ಖಾರ್ವಿ ಅವರ ಆತ್ಮೀಯರು,ಹಿತೈಷಿ ಗಳು ಭಾಗವಹಿಸಿ ಅವರ ನಿಷ್ಕಲ್ಮಷ: ಸೇವೆಯನ್ನು ಕೊಂಡಾಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಕುಂದಾಪುರ ಪುರಸಭೆಯಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆಯನ್ನು ಆರಂಭಿಸಿದ ಇವರು ಬಳಿಕ ಮುಖ್ಯಾಧಿಕಾರಿಯಾಗಿ ನಿಯೋಜನೆ ಹೊಂದಿ ಬಳ್ಳಾರಿಯ ಕುಡತಿನಿ,ಬೈಂದೂರು ಪ. ಪಂ ನಲ್ಲಿ ಹಾಗೂ ಅದಕ್ಕೂ ಮುನ್ನ ಮೂಡಬಿದ್ರೆ,ಕಾರ್ಕಳ ಪುರಸಭೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಇ ದೀಗ ತನ್ನ ಸರಕಾರಿ ಸೇವೆಯನ್ನು ಪ್ರಥಮವಾಗಿ ಆರಂಭಿಸಿದ ಕುಂದಾಪುರ ಪುರಸಭೆಯಲ್ಲಿಯೇ ಅವರು ತನ್ನ ಸೇವಾ ನಿವೃತ್ತಿಯನ್ನು ಪಡೆಯುತ್ತಿರುವುದು ವಿಶೇಷವೇ ಸರಿ. ಈ ಸಂದರ್ಭದಲ್ಲಿ ತನ್ನ ಸೇವಾ ವಧಿಯಲ್ಲಿ ಸಹಕಾರ ವಿತ್ತು ಪ್ರೋತ್ಸಾಹಿಸಿದ ಎಲ್ಲರನ್ನು ಸ್ಮರಿಸಿಕೊಂಡ ಅವರು ಕ್ರತಜ್ಞತೆಗಳನ್ನು ಅರ್ಪಿಸಿದರು.ಪುರಸಭೆಯ ಪ್ರಥಮ ದರ್ಜೆ ಸಹಾಯಕ ಗಣೇಶ್ ಜನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.