ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ವತಿಯಿಂದ ರೈನೀ ಡೇ – ಬ್ಲೂ ಡೇ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ನೀಲಿ ಬಣ್ಣವು ಶಾಂತಿ ಮತ್ತು ವಿಶಾಲತೆಯ ಸಂಕೇತವಾಗಿ ಪ್ರಕೃತಿಯ ಸೊಬಗಿಗೆ ಇಂಬು ಕೊಟ್ಟ ಬಗೆಯನ್ನು ಸಾರುವ ಈ ಕಾರ್ಯಕ್ರಮವನ್ನು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ – ಮಕ್ಕಳಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕುವ ಇಂತಹ ಕಾರ್ಯಕ್ರಮವು ಕಲಿಕೆಯ ಸಂದರ್ಭದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಪ್ರಕೃತಿಯೊಂದಿಗೆ ಬೆಸೆದುಕೊಂಡು ಪರಿಸರ ಕಾಳಜಿ ಉಳ್ಳವರಾಗಿ ಬೆಳೆದು ಸಮಾಜದ ಹಿತ ಕಾಯಬೇಕು. ನೆಲ ಜಲವನ್ನು ಕಾಪಿಟ್ಟುಕೊಳ್ಳುವ ಮನೋಭಾವ ಮಕ್ಕಳಲ್ಲಿ ಮೂಡಬೇಕು ಎಂದರು. ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ನೀಲಿ ಬಣ್ಣದ ಉಡುಗೆಯನ್ನು ಧರಿಸಿ, ವಿವಿಧ ನೀಲಿ ಬಣ್ಣದ ವಸ್ತುಗಳನ್ನು ಪ್ರದರ್ಶಿಸಿದರು. ಮಳೆಯ ಮಹತ್ವವನ್ನು ತಿಳಿಸುವ ಹಾಡು -ನೃತ್ಯಗಳನ್ನು ನಡೆಸಿಕೊಟ್ಟರು. ಶಿಕ್ಷಕಿ ಶ್ರೀಮತಿ ರೇಣುಕಾರವರು ಕಾರ್ಯಕ್ರಮವನ್ನು ನಿರೂಪಿಸಿರಿ, ವಂದಿಸಿದರು.
