ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಪದಪ್ರಧಾನ ಸಮಾರಂಭ ತೆಕ್ಕಟ್ಟೆ ಹಯಾಗ್ರೀವ ದಲ್ಲಿ ನಡೆಯಿತು. PMJF ಲಯನ್ ವೆಂಕಟೇಶ್ ಹೆಬ್ಬಾರ್ ಪದ ಪ್ರದಾನ ಸಮಾರಂಭ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಚಂದ್ರಿಕಾ ಧನ್ಯ, ಕಾರ್ಯದರ್ಶಿಯಾಗಿ ಜಯಶೀಲ ಕಾಮತ್ ಹಾಗೂ ಖಜಾಂಜಿಯಾಗಿ ಶುಭಾ ಶೇಟ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಸದಾನಂದ ನಾವುಡ, ಪ್ರಾಂತ್ಯಾಧ್ಯಕ್ಷರಾದ ಲಯನ್ ಸರಸ್ವತಿ ಪುತ್ರನ್, ಕಾರ್ಯದರ್ಶಿ ಲಯನ್ ಆಶಾ ಶಿವರಾಮ ಶೆಟ್ಟಿ, ವಲಯ್ಯಾಧ್ಯಕ್ಷರಾದ ಇಂಜಿನಿಯರ್ ರವೀಂದ್ರ ಕಾವೇರಿ, ಎಕ್ಸ್ಟೆಂಶನ್ ಚೇರ್ ಪರ್ಸನ್ ಅಕ್ಷಯ್ ಹೆಗ್ಡೆ ಮೊಳಹಳ್ಳಿ, Dist GAT Consultant ಅರುಣ್ ಕುಮಾರ್ ಹೆಗಡೆ, ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸ್ಯಾಕ್ಸೋಫೋನ್ ವಾದನದಲ್ಲಿ ಅದ್ವಿತೀಯ ಸಾಧನೆ ಮೆರೆದ ಅರಳು ಪ್ರತಿಭೆ, ಕುಮಾರಿ ಐಸಿರಿ ದೇವಾಡಿಗ, ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಅಡಿಗ ಇವರನ್ನು ಸನ್ಮಾನಿಸಲಾಯಿತು. ಪರಿಸರದ ಭಜನೆ ಗುರುಗಳಾದ ದಿನೇಶ್ ಸುವರ್ಣ ಇವರಿಗೆ ಕರಾವಳಿ ಭಜನಾ ಗುರು ಬಿರುದು ನೀಡಿ ಗೌರವಿಸಲಾಯಿತು. ಪರಿಸರದ ಈರ್ವರು ಅಸಹಾಯಕರನ್ನು ಗುರುತಿಸಿ ಚೆಕ್ಕುಗಳನ್ನು ವಿತರಿಸಲಾಯಿತು.
ಡಾ| ಮೈತ್ರಿ ಜಿ ನಾಯಕ್ ಫ್ಲಾಗ್ ಸೆಲ್ಯೂಟೇಷನ್ ಹಾಗೂ ಗೀತಾಂಜಲಿ ನಾಯಕ್ ಇವರು ಲಯನ್ಸ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು. ಪ್ರತಿಮಾ ಪ್ರಾರ್ಥಿಸಿದರು. ಕಲ್ಪನಾ ಭಾಸ್ಕರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಶ್ರೀ ಧನ್ಯ , ಸುಪ್ರಿಯ ಶೆಟ್ಟಿ, ದೀಪಿಕಾ ಸಾಮಗ, ಗೀತಾಂಜಲಿ ನಾಯಕ್ , ಪ್ರತಿಮಾ ಹೆಗಡೆ ಮುಖ್ಯ ಅತಿಥಿಗಳ, ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಚಂದ್ರಿಕಾ ಧನ್ಯ ಇವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಜಯಶೀಲಾ ಕಾಮತ್ ಧನ್ಯವಾದ ಸಮರ್ಪಣೆ ಮಾಡಿದರು. ಲಯನ್ ಡಾ|| ವಾಣಿಶ್ರೀ ಐತಾಳ್ ಹಾಗೂ ಲಯನ್ ಶ್ರುತಿ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಆರಭಿ ಸಾಮಗಳಿಂದ ಸ್ವಾಗತ ನೃತ್ಯ ಹಾಗೂ ಐಸಿರಿ ದೇವಾಡಿಗ ಇವರಿಂದ ಸ್ಯಾಕ್ಸೋಫೋನ್ ವಾದನ ಜರುಗಿತು.
ಪ್ರಾಂತ್ಯದ ಎಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳು, ಖಜಾಂಜಿಗಳು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಸದಸ್ಯರು ಹಾಗೂ ಲಯನ್ಸ್ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಎಲ್ಲರಿಗೂ ರಾಂಬುಟನ್ ಗಿಡವನ್ನು ಕಾರ್ಯಕ್ರಮದ ಸವಿ ನೆನಪಿಗಾಗಿ ಹಂಚಲಾಯಿತು.
