ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಕುಂದಾಪುರ ಆಯೋಜಿಸಿದ ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ವಿಜಯಶ್ರೀ ಎಂ ಹಾಲಾಡಿ ಅವರ ಮುಂಡಪ್ಪ ಮಾವಿನ ಮರ’ ಕಥೆ ಪ್ರಥಮ ಸ್ಥಾನ ಪಡೆದಿದೆ. ಪೂರ್ಣಿಮಾ ಹೆಗಡೆ ಅವರ ನಾಳೆಗಳನ್ನು ಬಿತ್ತಿದ ನಿನ್ನೆಗಳು’ ಕಥೆ ದ್ವಿತೀಯ, ಶ್ರೀರಂಜಿನಿ ಅವರ ‘ಮಂಜುಮಾಮಿಯ ಹೂದೋಟ’ ಕಥೆ ತೃತೀಯ ಸ್ಥಾನ ಪಡೆದಿದೆ.
ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು: ಶಾಂತಲಾ ರಾವ್ (ಮನೆಯೊಳಗೊಂದು ಮನೆ), ಭಾರತಿ ಮರವಂತೆ (ಗಂಗಿ) ಭವ್ಯ ಹಳೆಯೂರು (ಅವಳ ನಿರ್ಧಾರ), ಯಶಸ್ವಿನಿ ಶ್ರೀಧರ ಮೂರ್ತಿ (ಕಥೆಯ ಹೂವೊಂದು ಅರಳಿ), ನಿರ್ಮಲಾ ನಾಯಕ್ (ತನು ಸುಟ್ಟ ಬೂದಿಯಲ್ಲಿ ಪುನಃ ಹುಟ್ಟಿ) ಆಶಾ ಮಯ್ಯ ಪುತ್ತೂರು (ಟ್ರಂಕಿನೊಳಗಣ ಬೆಚ್ಚನೆ ಕನಸು).
ಈ ಕಥಾಸ್ಪರ್ಧೆಯಲ್ಲಿ 125ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ತೀರ್ಪುಗಾರರಾಗಿ ಖ್ಯಾತ ಲೇಖಕರಾದ ಪ್ರೊ.ಉದಯಕುಮಾರ್ ಹುಬ್ಬು, ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ಣು, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸಹಕರಿಸಿದ್ದರು.
ಆಗಸ್ಟ್ 8-2026ರಂದು ಶನಿವಾರ ಮಧ್ಯಾಹ್ನ 2.30ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಗೌರವಾಧ್ಯಕ್ಷರಾದ ಡಾ.ಪಾರ್ವತಿ ಜಿ.ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
