ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ತಿಮ್ಮ ಪೂಜಾರಿ ಪದಪ್ರದಾನ ಸಮಾರಂಭ
ಕುಂದಾಪುರ ಮಿರರ್ ಸುದ್ದಿ…
ಕೋಟ: ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಸದಾ ಮುಂಚೂಣಿಗೆ ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ತಿಮ್ಮ ಪೂಜಾರಿ ಪದಪ್ರದಾನ ಸಮಾರಂಭ
ಪಕ್ಷ ಸಂಘಟನೆ,ಯುವ ಸಮುದಾಯದೊಂದಿಗೆ ಕಾಂಗ್ರೆಸ್ – ಕೆ.ಜಯಪ್ರಕಾಶ್ ಹೆಗ್ಡೆ
ಕೋಟ: ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಸದಾ ಮುಂಚೂಣಿಗೆ ನಿಲ್ಲುತ್ತದೆ ಹಾಗೆಯೇ ಯುವ ಸಮುದಾಯದ ಬೆನ್ನಿ ಸದಾ ನಿಲ್ಲಲಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಭಾನುವಾರ ಸಾಲಿಗ್ರಾಮ ಚೇಂಪಿ ವಿಶ್ವಕರ್ಮ ಸಭಾಂಗಣದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಯ್ಕೆಗೊಂಡ ಜಿ. ತಿಮ್ಮ ಪೂಜಾರಿ ಅವರ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಯುವ ಸಮುದಾಯವನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದ ದೋರಣೆಯನ್ನು ಖಂಡಿಸಿ ಕಾಕ್ರೋಚ್ ಎಂಬ ಯುವ ಶಕ್ತಿಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕೈಜೋಡಿಸಿ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಿದೆ ಎಂದರಲ್ಲದೆ ಕೇಂದ್ರದ ನರೇಂದ್ರ ಮೋದಿ ಸರಕಾರ ನೀಟ್ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಖಂಡಿಸಿದರು.ಸರಕಾರಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕೆ ವಿನಹ ಅವರ ಹಕ್ಕನ್ನು ಕಸಿಯುವ ಕಾರ್ಯ ಮಾಡಿದೆ ಇನ್ನೊಂದೆಡೆ ಅಯೋಧ್ಯ ರಾಮನ ಹೆಸರಿನಲ್ಲಿ ಲೂಟಿ ಇಷ್ಟೆಲ್ಲ ನಡೆದರೂ ಮಾಧ್ಯಮಗಳು ಸ್ಪಷ್ಟ ವರದಿಗಾರಿಕೆಯನ್ನು ವಾಸ್ತವಾಂಶದ ಮೂಲಕ ವರದಿ ಪ್ರಕಟಿಸಬೇಕು ಎಂದು ಪತ್ರಿಕೋದ್ಯಮದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿಯಂತಹ ಪತ್ರಕರ್ತರನ್ನು ನೆನಪಿಸಿ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಯೋಜನೆಗಳಾಗಿ ರೂಪುಗೊಂಡಿದೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಈವರೆಗಿನ ಕಾರ್ಯವೈಕರಿಗೆ ಮೆಚ್ಚುಗೆ ಸೂಚಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರೆಕೆ ಮಾತನಾಡಿ ದೇಶದ ಭವಿಷ್ಯ ರೂಪಿಸುವ ಯುವ ಸಮುದಾಯಕ್ಕೆ ಕೇಂದ್ರ ಸರಕಾರ ಅನ್ಯಾಯ ವೆಸೆಗಿದೆ ಇದರ ಪರಿಣಾಮ ದೇಶಾದ್ಯಂತ ವಿದ್ಯಾರ್ಥಿಗಳನ್ನು ರೊಚ್ಚಿಗೆಳುವಂತೆ ಮಾಡಿದೆ,ದೇಶದ ಪ್ರಧಾನಿಯೊರ್ವರು ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸುವ ಬದಲು ಮಧ್ಯರಾತ್ರಿಯಲ್ಲಿ ರೀಲ್ಸ್ ಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ,ಕಳೆದ ಹನ್ನೊಂದು ವರ್ಷಗಳಿಂದ ಯುವ ಸಮುದಾಯದ ದಾರಿ ತಪ್ಪಿಸುವ ಕೆಲಸ ಕೇಂದ್ರದ ಬಿಜೆಪಿ ಸರಕಾರ ಮಾಡಿದೆ ಎಂದು ರಾಜ್ಯ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಕೇಂದ್ರದಲ್ಲೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಪತ ಮಾಡಿದರು.
ಇದೇವೇಳೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ನೂತನ ಅಧ್ಯಕ್ಷ ಜಿ.ತಿಮ್ಮ ಪೂಜಾರಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಕೆ.ಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ,ಕೆ.ಪಿ.ಸಿ.ಸಿ. ವಕ್ತಾರರಾದ ಸುಧೀರ್ ಕುಮಾರ್ ಮರೋಳಿ ,ರಾಜ್ಯ ಉಸ್ತುವಾರಿ ಹೆಮಂತ್ ಸಿಂಗ್ ಪಟೇಲ್ ಕೇಂದ್ರ ಸರಕಾರದ ಧೋರಣೆ ಹಾಗೂ ರಾಜ್ಯಸರಕಾರದ ಜನಪರ ಯೋಜನೆ,ಪಕ್ಷ ಬಲವರ್ಧನೆ ಕುರಿತು ಮಾತನಾಡಿದರು.
ಕೋಟ ಬ್ಲಾಕ್ ಕಾಂಗ್ರೆಸ್ ಪ್ರಸ್ತುತ ಅಧ್ಯಕ್ಷ ಶಂಕರ್ ಕುಂದರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ತಮ್ಮ ಅವಧಿಯಲ್ಲಿ ಕಾರ್ಯಕರ್ತರು ಮುಖಂಡರುಗಳ ಸಹಕಾರವನ್ನು ಸ್ಮರಿಸಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ,ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್,ಜ್ಯೋತಿ ಹೆಬ್ಬಾರ್,ಜಯಕುಮಾರ್,ಎಸ್ ರಾಜು ಪೂಜಾರಿ,ವಿಕಾಸ್ ಹೆಗ್ಡೆ,ಭುಜಂಗ ಶೆಟ್ಟಿ,ರೋಶನ್ ಕುಮಾರ್ ಶೆಟ್ಟಿ,ಇಚ್ಚಿತಾರ್ಥ ಶೆಟ್ಟಿ,ಚಂದ್ರಶೇಖರ್ ಶೆಟ್ಟಿ,ಮಮತಾ ಶೆಟ್ಟಿ,ಹರಿಪ್ರಸಾದ್ ಶೆಟ್ಟಿ,ರಮೇಶ್ ಶೆಟ್ಟಿ,ಶ್ರೀನಿವಾಸ್ ಅಮೀನ್,ನಿರೀಕ್ಷಾ ಮೆಂಡನ್,ಹೇರೂರು ಸದಾನಂದ ಶೆಟ್ಟಿ,ಪ್ರಕಾಶ್ಚಂದ್ರ ಶೆಟ್ಟಿ,ಚಂದ್ರಶೇಖರ ಮೆಂಡನ್,ಕೃಷ್ಣಪ್ರಸಾದ್, ಅಶೋಕ್ ಪೂಜಾರಿ ಬೀಜಾಡಿ,ರಮೇಶ್ ಕಾಂಚನ್,ಮಲ್ಯಾಡಿ ಶಿವರಾಮ ಶೆಟ್ಟಿ,ಪ್ರಸಾದ್ ರಾಜ್ ಕಾಂಚನ್,ರೇಖಾ ಸುವರ್ಣ ಸೇರಿದಂತೆ ಪಕ್ಷದ ಅನೇಕರು ಉಪಸ್ಥಿತರಿದ್ದರು. ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ,ವಿನಯ್ ಕಬ್ಯಾಡಿ,ಗೋಪಾಲ್ ಬಂಗೇರ ಮತ್ತಿತರರು ಸಹಕರಿಸಿದರು.
