ಕೋಟೇಶ್ವರ :ಪ್ರಿಮ್‌ರೋಸ್ ಫೌಂಡೇಶನ್ ಶಾಲೆಯಲ್ಲಿ ಪೋಷಕರ ಸಭೆ

0
58

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಚಿರಂತನ ಎಜುಕೇಶನ್ ಇನ್‌ಸ್ಟಿಟ್ಯೂಷನ್ಸ್‌ನ ಅಂಗಸಂಸ್ಥೆಯಾದ ಪ್ರಿಮ್‌ರೋಸ್ ಫೌಂಡೇಶನ್ ಸ್ಕೂಲ್ ವತಿಯಿಂದ ಮಾಸಿಕ ಪೋಷಕರ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ಸರ್ವತೋಮುಖ ಬೆಳವಣಿಗೆ, ಚಟುವಟಿಕೆ ಆಧಾರಿತ ಕಲಿಕೆ, ಓದುವ ಅಭ್ಯಾಸ, ಹಾಗೂ ವಿವಿಧ ಸೃಜನಾತ್ಮಕ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಶಾಲೆ ಹಾಗೂ ಪೋಷಕರ ಸಹಭಾಗಿತ್ವದ ಮಹತ್ವವನ್ನು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಚಿಂತನಾ ರಾಜೇಶ್, ಅಕಾಡೆಮಿಕ್ ಲೀಡ್ ವಿಲ್ಮಾ ಡಿ’ಸಿಲ್ವಾ, ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರಶಾಂತ್ ಸಂಸ್ಥೆಯಲ್ಲಿ ನಡೆಯುವ ಹಲವು ಇತರೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಟೀಚರ್ ಎಜುಕೇಶನ್ ವಿಭಾಗದ ವಿದ್ಯಾರ್ಥಿನಿಯರಾದ ಪವಿತ್ರಶೆಟ್ಟಿ ಹಾಗೂ ಮೋಹಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here