ವಂಡ್ಸೆಯಲ್ಲಿ ನಾರಾಯಣ ಐ ಕೇರ್ ಉದ್ಘಾಟನೆ

0
7

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಂಡ್ಸೆ ಮಾರುಕಟ್ಟೆ ರಸ್ತೆಯ ಕಲ್ಮಾಡಿ ಪಂಜು ಪೂಜಾರಿ ಕಾಂಪ್ಲೆಕ್ಸ್‍ನಲ್ಲಿ ನಾರಾಯಣ ಐ ಕೇರ್ ಇದರ ವಂಡ್ಸೆ ಶಾಖೆ ಇತ್ತೀಚೆಗೆ ಶುಭಾರಂಭಗೊಂಡಿತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ, ತೆಂಕೂರು ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ ನಾರಾಯಣ ಐ ಕೇರ್ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಾರಾಯಣ ಐ ಕೇರ್ ಇದರ ವೈದ್ಯರಾದ ಡಾ.ಶಶಿಧರ, ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಉದ್ಯಮಿಗಳಾದ ಸುಧಾಕರ ಶೆಟ್ಟಿ ಹೆಬ್ರಿ, ಪ್ರಭಾಕರ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here