ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್: ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ಜಯಭೇರಿ

0
139

7 ಚಿನ್ನದ ಪದಕಗಳೊಂದಿಗೆ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಿರಿಮಂಜೇಶ್ವರ :ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಇವರು ಜಂಟಿಯಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ದಾಖಲೆಯ 5 ವಿದ್ಯಾರ್ಥಿಗಳು 7 ಚಿನ್ನದ ಪದಕ ಗಳಿಕೆಯೊಂದಿಗೆ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗೆ ನೇರ ಅರ್ಹತೆ ಪಡೆದಿದ್ದಾರೆ .

14ರ ವಯೋಮಾನದ ಬಾಲಕಿಯರ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಅನುಷ್ಕಾ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಕಲಾತ್ಮಕ ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಅಮೂಲ್ಯ ಪ್ರಥಮ ಸ್ಥಾನ,
ಬಾಲಕರ ಕಲಾತ್ಮಕ ಯೋಗಾಸನ ಸ್ಪರ್ಧೆಯಲ್ಲಿ ಕುಮಾರ ವಂಶಿತ್ ಪ್ರಥಮ ಸ್ಥಾನ ಪಡೆದರು.
17ರ ವಯೋಮಾನದ ಬಾಲಕಿಯರ ಕಲಾತ್ಮಕ ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಸಾನಿಧ್ಯಾ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಅನಿಷ್ಕಾ ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ಚಿನ್ನದ ಪದಕವನ್ನು ಮುಡಿಗೆರಿಸಿಕೊಂಡರು.
14 ವರ್ಷ ವಯೋಮಾನದ ಕಲಾತ್ಮಕ ಯೋಗಾಸನದ ಗುಂಪು ಸ್ಪರ್ಧೆಯಲ್ಲಿ ಕುಮಾರಿ ಅನುಷ್ಕಾ ಮತ್ತು ಕುಮಾರಿ ಅಮೂಲ್ಯ ಜೋಡಿಯು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆಯಿತು.
17ರ ವಯೋಮಾನದ ರಿದಮಿಕ್ ಯೋಗಾಸನ ಸ್ಪರ್ಧೆಯ ಗುಂಪು ವಿಭಾಗದಲ್ಲಿ ಕುಮಾರಿ ಸಾನಿಧ್ಯಾ ಮತ್ತು ಕುಮಾರಿ ಅನಿಷ್ಕಾ ಜೋಡಿಯು ಪ್ರಥಮ ಸ್ಥಾನ ಮತ್ತು ಚಿನ್ನದ ಪದಕ ಪಡೆದುಕೊಂಡಿತು. ಈ ಅತ್ಯಮೋಘ ಜಯದೊಂದಿಗೆ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ದಾಖಲೆಯ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದರು.
ವಿದ್ಯಾರ್ಥಿಗಳ ಈ ಅಪ್ರತಿಮ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ್ ಮೊಗವೀರರು ” ನಮ್ಮ ಸಂಸ್ಥೆಯಲ್ಲಿ ಯೋಗದ ಕಲಿಕೆಗೆ ಹೆಚ್ಚಿನ ಆದ್ಯತೆ ಮತ್ತು ಅವಕಾಶ ನೀಡುತ್ತಿದ್ದೇವೆ. ಯೋಗ ತರಬೇತಿಗಾಗಿ ಪ್ರತಿನಿತ್ಯ ನುರಿತ ತರಬೇತುದಾರ ತಂಡ ಶ್ರಮಿಸುತ್ತಿದೆ. ಯೋಗ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾಗುವ ದಿನ ದೂರವಿಲ್ಲ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರ ಹೆಮ್ಮೆಯಾಗಿದೆ” ಎಂದು ಹರ್ಷ ವ್ಯಕಪಡಿಸಿದರು. ಸಮರ್ಪಣಾ ಎಜ್ಯುಕೇಷನಲ್ ಟ್ರಸ್ಟ್ ನ ಕಾರ್ಯದರ್ಶಿಯಾಗಿರುವ ಶ್ಯಾಮಲ ಗಣೇಶ್ ಮೊಗವೀರ, ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ , ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here