ಸಿದ್ದಾಪುರ :ದ.ಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಇವತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ – ಬಿ.ವೈ.ರಾಘವೇಂದ್ರ

0
6

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹೈನುಗಾರರಿಗೆ ಉತ್ತೇಜನ ನೀಡುವಲ್ಲಿ ಕೇಂದ್ರ ರಾಜ್ಯ ಸರಕಾರಗಳು ಪ್ರೋತ್ಸಾಹ ನೀಡುತ್ತಿವೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹೈನುಗಾರರಿಗೆ ನೀಡಲು ಆರಂಭಿಸಿದ ಪ್ರೋತ್ಸಾಹಧನ ಇವತ್ತು ಆಶಾಕಿರಣವಾಗಿ ಪರಿಣಮಿಸಿದೆ. ಯಾವುದೇ ಸರಕಾರ ಬಂದರೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ದ.ಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಇವತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಇದರ ಹಿಂದೆ ಶ್ರಮಜೀವಿ ಹೈನುಗಾರರ ಪರಿಶ್ರಮವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಆ.1 ರಂದು ಸಿದ್ಧಾಪುರದ ಶ್ರೀರಂಗನಾಥ ಸಭಾಭವನದಲ್ಲಿ ನಡೆದ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಐದು ದಶಕಗಳಿಂದ ನಿಸ್ವಾರ್ಥ ಸೇವಾ ಮನೋಭಾವದಿಂದ ಗ್ರಾಮೀಣ ಭಾಗದ ಹಾಲು ಉತ್ಪಾದಕರಿಗೆ, ರೈತ ಬಾಂಧವರಿಗೆ ಹಾಗೂ ಮಹಿಳಾ ಶಕ್ತಿಗೆ ಆರ್ಥಿಕ ಭದ್ರತೆ ನೀಡುತ್ತಾ ಸಹಕಾರ ರಂಗದಲ್ಲಿ ಹೆಮ್ಮೆಯ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂಭ್ರಮದ ಸಂಗತಿ. ಮುಂದಿನ ದಿನಗಳಲ್ಲಿ ಈ ಹಾಲು ಉತ್ಪಾದಕರ ಸಹಕಾರ ಸಂಘ ಇನ್ನಷ್ಟು ಗುರಿಗಳೊಂದಿಗೆ ಮಾದರಿಯಾಗಿ ಬೆಳೆಯಲಿ ಎಂದರು.
ಸಿದ್ಧಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಡಿ.ಗೋಪಾಲಕೃಷ್ಣ ಕಾಮತ್ ಮಾತನಾಡಿ, ಈ ಸಂಸ್ಥೆ ಯಶಸ್ವಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವಲ್ಲಿ ಸಂಘವನ್ನು ಕಟ್ಟಿಬೆಳೆಸಿದ ಹಿರಿಯರ ಶ್ರಮವಿದೆ. ಅರ್ಥಪೂರ್ಣ ಸುವರ್ಣಮಹೋತ್ಸವದ ಸಂಕಲ್ಪ ಮಾಡಿ ಕಳೆದ ಮಾರ್ಚ್‍ಗೆ 1700 ಲೀಟರ್ ಹಾಲು ಇದ್ದುದ್ದನ್ನು 3ಸಾವಿರ ಲೀಟರ್‍ಗೆ ಏರಿಸುವ ಗುರಿಯೊಂದಿಗೆ ಹಸು ಖರೀದಿಸುವರಿಗೆ 3ಸಾವಿರ ರೂ ಸಹಾಯಧನ, 1ಚೀಲ ಪಶು ಆಹಾರ ನೀಡುವುದರೊಂದಿಗೆ ಪ್ರೋತ್ಸಾಹಿಸಲಾಯಿತು. ಅದರಲ್ಲಿ ಯಶಸ್ಸು ಕಂಡಿದ್ದು ಇದೀಗ ಸುವರ್ಣ ಮಹೋತ್ಸವದ ನೆನಪಿನಲ್ಲಿ ಐದು ಸಾವಿರ ಲೀಟರ್ ಹಾಲು ಸಂಗ್ರಹಣೆಯ ಗುರಿ ಹೊಂದಿದ್ದೇವೆ. 50 ದನಗಳನ್ನು ನೀಡುವ ಯೋಜನೆಯನ್ನು ಹೊಂದಿದ್ದೇವೆ ಎಂದರು.
ದ.ಕಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಕೊಡವೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಮಲಶಿಲೆ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಎಸ್.ಸಚ್ಚಿದಾನಂದ ಚಾತ್ರ ಶುಭಾಶಂಸನೆಗೈದರು.
ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್, ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಮಮತಾ ಆರ್.ಶೆಟ್ಟಿ, ಹೆಚ್.ವಿಠಲ ಶೆಟ್ಟಿ ಶೇಡಿಕೊಡ್ಲು, ದ,ಕ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ.ರವಿರಾಜ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಶಂಕರ ನಾಯ್ಕ್, ವಿಸ್ತರಣಾಧಿಕಾರಿ ಮಂಜುನಾಥ ಮೊಗವೀರ, ಸಲಹಾ ಪಶುವೈದ್ಯರಾದ ಡಾ.ಇಂದ್ರಜಿತ್, ಮುಖ್ಯಕಾರ್ಯನಿರ್ವಹಣಾಧಿಕಾರಿ ರತೇಶ ಕೊಠಾರಿ, ನಿರ್ದೇಶಕರಾದ ಸೂರ್ಯನಾರಾಯಣ ಜೋಯ್ಸ ಗುರುಬಸವನಡಿ, ಸಂಪತ್ ಕುಮಾರ ಶೆಟ್ಟಿ ಹೊಳೆಶಂಕರನಾರಾಯಣ, ರಘುರಾಮ ಶೆಟ್ಟಿ ಹೆಗ್ಗೊಡ್ಲು, ಹೆಚ್.ರಘುರಾಮ ಶೆಟ್ಟಿ ಆನೆಮಕ್ಕಿ, ಸತೀಶ ಶೆಟ್ಟಿ ತುಂಬಿಮನೆ, ನಾರಾಯಣ ಪೂಜಾರಿ ಕರಿಮನೆ, ನಾರಾಯಣ ನಾಯ್ಕ ಹೆಗ್ಗೊಡ್ಲು, ಗಿರಿಜಾ ಶೆಡ್ತಿ ಹರ್ಕೆಬಾಳು, ಜಯ ಪೂಜಾರಿ ಋಷಿಕೆರೆ, ಸುಶೀಲಾ ಕುಲಾಲ್ತಿ ದಕ್ಕೇರಬಾಳು, ಟಿ ಬಾಬಿ ತೆಂಕಬೈಲು ಹಾಜರಿದ್ದರು.
ದಯಾನಂದ ರಾವ್ ಕಾರ್ಯಕ್ರಮ ನಿರ್ವಹಿಸಿ, ಟಿ.ಜಿ ಪಾಂಡುರಂಗ ಪೈ ವಂದಿಸಿದರು.

LEAVE A REPLY

Please enter your comment!
Please enter your name here