ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಚಿರಂತನ ಶಿಕ್ಷಣ ಸಂಸ್ಥೆಗಳು ಕೋಟೇಶ್ವರ ಇವರ ವತಿಯಿಂದ ವಿದ್ಯಾರ್ಥಿ ಶಿಕ್ಷಕರಿಗಾಗಿ “ತರಗತಿ ಕೋಣೆಯ ನಿರ್ವಹಣೆ ಮತ್ತು ಸಂಸ್ಕೃತಿ” ಎಂಬ ವಿಷಯದ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಗಸ್ಟಿನ್ ಕೆ. ಎ., ಶಿಕ್ಷಣತಜ್ಞರು, ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಾಜಿ ಪ್ರಾಂಶುಪಾಲರು ಭಾಗವಹಿಸಿ, ತರಗತಿ ಕೊಠಡಿಯ ಸಕಾರಾತ್ಮಕ ಸಂಸ್ಕೃತಿ, ಪರಿಣಾಮಕಾರಿ ಬೋಧನಾ ವಿಧಾನಗಳು, ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಕೌಶಲ್ಯಗಳು ಹಾಗೂ ಶಿಕ್ಷಕರ ವೃತ್ತಿಪರ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ನಿರ್ದೇಶಕಿ ಡಾ. ಚಿಂತನಾ ರಾಜೇಶ್, ಅಕಾಡೆಮಿಕ್ ಲೀಡ್ ವಿಲ್ಮಾ ಡಿ’ಸಿಲ್ವಾ, ಹಾಗೂ ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಪ್ರೇರಣಾ ಶಿಕ್ಷಣ ತರಬೇತಿ ವಿಭಾಗದ ಶಿಕ್ಷಕ ವಿದ್ಯಾರ್ಥಿಗಳಾದ ಸುಚಿತ್ರಾ ಸ್ವಾಗತಿಸಿ, ಮೋಹಿತಾ, ಚಾರುಲತಾ ನಿರೂಪಿಸಿ, ಪ್ರೇಮಲತಾ ಪರಿಚಯಿಸಿ, ಪೂರ್ಣಿಮಾ ವಂದಿಸಿದರು.
