ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಮಿತ ವರದಿ ವರ್ಷದಲ್ಲಿ ಒಟ್ಟು 5659 ಸದಸ್ಯರಿದ್ದು, ಒಟ್ಟು ರೂ.27,15,306 ಪಾಲು ಬಂಡವಾಳವನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ರೂ.30,42,29,238.50 ಠೇವಣಾತಿಗಳನ್ನು ಹೊಂದಿದೆ. ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ರೂ.25,60,85,738 ಸಾಲ ನೀಡಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ರೂ.94.80.429.77 ನಿವ್ವಳ ಲಾಭ ಗಳಿಸಿದೆ ಎಂದು ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಅವರು ಕುಂದಾಪುರದ ಬಂಟರ ಸಂಕೀರ್ಣದ ಜಿ.ಕುಶಲ ಹೆಗ್ಡೆ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಮಿತ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2025-26ನೇ ಸಾಲಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಒಟ್ಟು ರೂ.11,75,49,712.76 ವಿನಿಯೋಗಿಸಲಾಗಿದೆ. ಸಂಘದಲ್ಲಿ ಒಟ್ಟು 7 ಗೋದಾಮುಗಳಿದ್ದು, ಒಟ್ಟು 2250 ಎಂ.ಟಿ ಸಾಮಥ್ರ್ಯ ಹೊಂದಿದೆ. ಇದರಲ್ಲಿ 5 ಗೋದಾಮುಗಳನ್ನು ಪಡಿತರ ಆಹಾರ ಸಾಮಾಗ್ರಿಗಳ ಶೇಖರಣೆಗಾಗಿ ಉಪಯೋಗಿಸಲಾಗುತ್ತಿದೆ. ಸಂಘವು ಒಟ್ಟು 3.74.5 ಎಕ್ರೆ ಸ್ಥಿರಾಸ್ಥಿಯನ್ನು ಹೊಂದಿದೆ ಎಂದರು.
ಸಂಸ್ಥೆ ರೈತರು, ಕೃಷಿಕರಿಗೆ, ಸಹಕರಿಗಳ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಹಿಂದೆ ಭತ್ತ ಖರೀದಿಸಿ ಅಕ್ಕಿ ಮಾರಾಟ, ಸಿಮೆಂಟ್ ವ್ಯಾಪಾರ, ಶಾಲೆಗಳಿಗೆ ಪುಸ್ತಕ ವಿತರಣೆ, ಇಲಾಖೆಗಳಿಗೆ ಪರಿಕರ ವಿತರಣೆ, ಬೊಂಡ ಮೇಳ,ರಾಸಾಯನಿಕ ಗೊಬ್ಬರ, ಕೀಟನಾಶಕ, ಅಡುಗೆ ಅನಿಲ ಏಜೆನ್ಸಿ ಮುಂತಾದ ಸೇವೆಗಳ ಮೂಲಕ ರೈತ ಸಹಕಾರಿಗಳ ಅನುಕೂಲಕ್ಕೆ ಸ್ಪಂದಿಸುತ್ತಾ ಬಂದಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ನಿರ್ದೇಶಕರಾದ ಎಂ.ಮೋಹನದಾಸ ಶೆಟ್ಟಿ ಮಲ್ಯಾಡಿ, ಆನಂದ ಬಿಲ್ಲವ ಉಪ್ಪಿನಕುದ್ರು, ಎಸ್.ಜಯರಾಮ ಶೆಟ್ಟಿ ಬೆಳ್ವೆ, ಪ್ರಭಾಕರ ಶೆಟ್ಟಿ ಜಡ್ಕಲ್, ಉಮೇಶ ಶೆಟ್ಟಿ ಕಲ್ಗದ್ದೆ, ಸದಾನಂದ ಮೊಗವೀರ ಕಾವ್ರಾಡಿ, ಎ.ಕಿರಣ್ ಹೆಗ್ಡೆ ಅಂಪಾರು, ಪ್ರಭಾಕರ ಶೆಟ್ಟಿ ಕೆರಾಡಿ, ಸತೀಶ ಶೆಟ್ಟಿ ಕೆ.ಕುಂದಾಪುರ, ರಕ್ಷಿತ್ ಶೆಟ್ಟಿ ಕೆ.ಕಾಳಾವರ, ಕೆ.ವಿಜಯ ಕುಮಾರ ಕಾವ್ರಾಡಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎಂ.ಮಹೇಶ್ ಹೆಗ್ಡೆ ಮೊಳಹಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಸಿಬ್ಬಂದಿ ರತ್ನ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿ ವಂದಿಸಿದರು.
