ಪಂಚವರ್ಣ ಸಂಘಟನೆ ಕಛೇರಿಯಲ್ಲಿ 80ನೇ ಹಸಿರು ಸ್ವಾತಂತ್ರ್ಯೋತ್ಸವ

0
30

ಕುಂದಾಪುರ ಮಿರರ್ ಸುದ್ದಿ…

ಕೋಟ: ಕ್ರಾಂತಿಕಾರಿಗಳ ಹಾಗೂ ಅಹಿಂಸಾ ತತ್ವದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ. ಇದಕ್ಕೆ ಕಾರ್ನಾಡ ಸದಾಶಿವ ರಾವ್ ಅವರ ಆ ಕಾಲಘಟ್ಟದ ಹೋರಾಟ ದಿನಗಳನ್ನು ನೆನೆಪಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರಸ್ತುತ ದೇಶ ಕಾಯುವ ಯೋಧರ ತ್ಯಾಗ ಬಲಿದಾನ ದೇಶವನ್ನು ಸುಭದ್ರತೆಗೊಳಿಸಿದೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ 80 ನೇ ಹಸಿರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು ಮಾತನಾಡಿ ಹೋರಾಟಗಾರದ ಸ್ವಾತಂತ್ರ್ಯವನ್ನು ನಾವುಗಳು ಅರ್ಥಪೂರ್ಣಗೊಳಿಸಿ ಜಾತಿ ಮತ ಧರ್ಮ ಬೇಧದಿಂದ ಅಭಿವೃದ್ಧಿ ಪತದತ್ತ ಕೊಂಡ್ಯೋಯುವ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ರಾವ್ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕೋಟ ಜಾಮೀಯಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ,ಕಾರ್ಯದರ್ಶಿ ಬಷೀರ್ ಸಾಹೇಬ್, ಕೋಟ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ದೇವಾಡಿಗ, ಉದ್ಯಮಿ ರಮೇಶ್ ಪ್ರಭು, ಪರಿಸರವಾದಿ ಕೋ.ಗಿ.ನಾ,ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಕಲಾವತಿ ಅಶೋಕ್ ಸ್ವಾಗತಿಸಿ, ಸನ್ಮಾನಪತ್ರವನ್ನು ಪುಷ್ಪ ಕೆ ಹಂದಟ್ಟು ವಾಚಿಸಿ, ಸುಜಾತ ಬಾಯರಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

ಕೊರಗ ಕಾಲೋನಿಯಲ್ಲಿ ಹಸಿರು ಸ್ವಾತಂತ್ರ್ಯ
80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೋಟತಟ್ಟು ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ಎಲ್ಲಾ‌ಮನೆಗಳಿಗೆ ಪಾರಿಜಾತ ಗಿಡ ನೆಟ್ಟು ಪರಿಸರ ಜಾಗೃತಿ ಮೆರೆಯಲಾಯಿತು.ಈ ಕಾರ್ಯಕ್ರಮದಲ್ಲಿ ಕೊರಗ ಮುಖಂಡರಾದ ಗಣೇಶ್ ಕೊರಗ ಕುಂಭಾಶಿ,ಗಣೇಶ್ ಕೊರಗ ಬಾರ್ಕೂರು,ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯೆ ಸೀತಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here