ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ಹೆಚ್. ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿಯವರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ . ಹರಿಪ್ರಸಾದ್ ಆದೇಶಿಸಿದ್ದಾರೆ .
ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಜವಾಬ್ದಾರಿ ನೀಡಲಾಗಿದೆ .
ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಯವರು ಈ ಹಿಂದೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಎನ್ಎಸ್ ಯು ಐ ಅಧ್ಯಕ್ಷರಾಗಿ , ಮಂಗಳೂರು ವಿ.ವಿ. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾಗಿ , ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ , ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು . ಪ್ರಸ್ತುತ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಮತ್ತು ಟಿಎಪಿಸಿಎಂಎಸ್ ಲಿ . ಅಧ್ಯಕ್ಷರಾಗಿದ್ದಾರೆ .
H.Hariprasad Shetty Kanmakki
