ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಓರ್ವ ವ್ಯಕ್ತಿ ಈ ಸಮಾಜವನ್ನು ಅಗಲಿದ ನಂತರ ಆತನ ಹೆಸರು ಕೆಲವೆ ಸಂದರ್ಭದಲ್ಲಿ ಅಳಿದು ಹೋಗುತ್ತದೆ. ಆದರೆ ಸಮಾಜಸೇವೆಯೇ ಉಸಿರಾಗಿರಿಸಿಕೊಂಡ ಸಂತೋಷ್ ಮೇಷ್ಟ್ರು ಹೆಸರು ವರ್ಷವಿಡೀ ಪ್ರಚಲಿತಗೊಂಡಿರುವುದು ಆತ ಮಾಡಿದ ನೈಜ ಕಾರ್ಯವೇ ಸಾಕ್ಷಿ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು.
ಭಾನುವಾರ ಕೋಟ ಪಡುಕರೆ ಕೆ.ಸಿ ಕುಂದರ್ ಸಭಾಂಗಣದಲ್ಲಿ ಜೈಹಿಂದ್ ಕ್ರಿಕೆಟರ್ಸ ಪಡುಕರೆ ನೇತೃತ್ವದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಪಂಚವರ್ಣ ಸಂಘಟನೆ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ಸಂತೋಷ್ ಮೇಷ್ಟ್ರು ಸಂಸ್ಮರಣೆಯ ಅಂಗವಾಗಿ ಬೃಹತ್ ರಕ್ತದಾನ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಜೀವನ ಪರ್ಯಂತ ಈ ಸಮಾಜಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಸಂತೋಷ್ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇಂತಹ ವ್ಯಕ್ತಿಗಳ ಹೆಸರಿನಲ್ಲಿ ಈ ಮಹತ್ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರ ಯಡಾಡಿ ಮತ್ಯಾಡಿಯ ಸುಜ್ಞಾನ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ರಮೇಶ್ ಶೆಟ್ಟಿ ಹಾಗೂ ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್ ನಾಯಕ ಸಂಸ್ಮರಣಾ ನುಡಿಗಳನ್ನಾಡಿದರು.
ಅಧ್ಯಕ್ಷತೆಯನ್ನು ಜೈಹಿಂದ್ ಕ್ರಿಕೆಟಸ್9 ಪ್ರಮುಖ ಉದಯ್ ಪಡುಕರೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಪಾಲುದಾರ ಭರತ್ ಶೆಟ್ಟಿ, ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಇಂಡಿಕಾ ಕಲಾಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ, ಪಂಚವರ್ಣ ಸಂಘಟನೆಯ ಲಲಿತಾ ಪೂಜಾರಿ, ಕೋಟ ಪಂಚಾಯತ್ ಮಾಜಿ ಸದಸ್ಯ ಭುಜಂಗ ಗುರಿಕಾರ, ಕೋಟ ಸಿ ಎ ಬ್ಯಾಂಕ್ ಸಿಇಒ ಶರತ್ ಕುಮಾರ್, ಮಣಿಪಾಲ ಕೆ.ಎಂಸಿ ಇದರ ವೈದ್ಯರಾದ ಡಾ.ವಿವೇಕ್, ಶೆಟ್ಟಿ ಉಪಸ್ಥಿತರಿದ್ದರು.
ಇದೇ ವೇಳೆ ಜರಗಿದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನ ಭಾಗಿಯಾಗಿದರು.
ಗೋವೆನ್ ಫ್ರೆಶ್ ಮರೈನ್, ಮಣೂರು ಪಡುಕರೆ, ಕರಾವಳಿ ಓಷನ್ ಪ್ರೋಡಕ್ಟ್ ಮಣೂರು ಪಡುಕರೆ, ಮನಸ್ಮಿತ ಫೌಂಡೇಶನ್ ಕೋಟ, ಹರ್ತಟ್ಟು ಯುವಕ ಮಂಡಲ, ಜಟ್ಟಿಗೇಶ್ವರ ಕ್ರಿಕೆಟರ್ಸ್ ಮಣೂರು, ವಾಹಿನಿ ಕ್ರಿಕೆಟ್ ಕ್ಲಬ್ ಮಣೂರು ಪಡುಕರೆ, ವಿನಾಯಕ ಫ್ರೆಂಡ್ಸ್ ಮಣೂರು ಪಡುಕರೆ, ಶ್ರೀಶಾ ಮಾರಿಕಾಂಬ ಕ್ರಿಕೆಟರ್ಸ್, ಮಣೂರು ಪಡುಕರೆ,ಜೈ ಕುಂದಾಪ್ರ ಸೇವಾ ಟ್ರಸ್ಟ್ , ಅರಮ ವಿಜಯ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಕ್ಲಬ್ ಕೋಟತಟ್ಟು ಪಡುಕರೆ, ಮಕ್ಕಿ ಕ್ರಿಕೆಟರ್ಸ್, ಶ್ರೀರಾಮ್ ಫ್ರೆಂಡ್ಸ್ ಮಣೂರು ಪಡುಕರೆ, ಶ್ರೀ ಅಯ್ಯಪ್ಪ ವಾಚ್ ವರ್ಕ್ಸ್ ಸಹಕಾರ ನೀಡಿತು.
ಇಂಡಿಕಾ ಬಳಗದ ಸಂತೋಷ್ ಕಾಂಚನ್ ಪ್ರಾಸ್ತಾವನೆ ಸಲ್ಲಿಸಿದರು. ಜೈಹಿಂದ್ ಕ್ರಿಕೆಟರ್ಸ ಕೀರ್ತಿಶ್ ಪೂಜಾರಿ ಸ್ವಾಗತಿಸಿದರು. ಇಂಡಿಕಾ ಬಳಗದ ಸಂಚಾಲಕ ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು. ಜೈಹಿಂದ್ ಕ್ರಿಕೆಟರ್ಸ ಮುಖ್ಯಸ್ಥ ಪ್ರಶಾಂತ್ ಪಡುಕರೆ ಕಾರ್ಯಕ್ರಮ ಸಂಯೋಜಿಸಿದರು.
