ಶೈಕ್ಷಣಿಕ ನಿಧಿ,ಅನಾರೋಗ್ಯ ಪೀಡಿತರಿಗೆ ನೆರವು ಕಾರ್ಯಕ್ರಮ ಆಯೋಜನೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಗುಂಡ್ಮಿ ಸಮೀಪದ ಹದ್ದಿನಬೆಟ್ಟು ಯಡಬೆಟ್ಟು ಸಾಮೂಹಿಕ ಶ್ರೀ ಗಣೇಶೋತ್ಸವ ಆರಾಧನೋತ್ಸವ ಸಮಿತಿ ಆಶ್ರಯದಲ್ಲಿ ಇದೇ ಸೆಪ್ಟೆಂಬರ್ 14ರಂದು ಸಂಜೆ 7.ಗ ಹದ್ದಿನಬೆಟ್ಟು ಪರಿಸರದಲ್ಲಿ ನಡೆಯುವ 29 ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವ ಕಾರ್ಯಕ್ರಮದಲ್ಲಿ ಜರಗಲಿದ್ದು
ಈ ವೇದಿಕೆಯಲ್ಲಿ ಪದ್ಮಶ್ರೀ ಅಕ್ಷರಸಂತ ಹರೇಕಳ ಹಾಜಬ್ಬರಿಗೆ ಹದ್ದಿನಬೆಟ್ಟು ಆರಾಧನೋತ್ಸವ ಪುರಸ್ಕಾರ ಆಯ್ಕೆಗೊಳಿಸಲಾಗಿ ಈ ಪುರಸ್ಕಾರ 50ಸಾವಿರ ನಗದು ಒಳಗೊಂಡ ಶಾಶ್ವತ ಫಲಕ ನೀಡಿ ಗೌರವಿಸಲಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯ 30 ವಿದ್ಯಾರ್ಥಿಗಳಿಗೆ 5 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಣೆ, ಎರಡು ಸ್ಥಳೀಯ ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವ ವೇತನ, 6 ಜನ ಅನಾರೋಗ್ಯ ಪೀಡಿತರಿಗೆ ಸಹಾಯನಿಧಿ ವಿತರಣೆ ಜತೆಗೆ ಹಲವು ಸಾಮಾಜಿಕ ಕಾರ್ಯಗಳು ಈ ವೇದಿಕೆಯಲ್ಲಿ ನಡೆಯಲಿದೆ ಎಂದು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ಗುಂಡ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
