ಕಥೊಲಿಕ್ ಸಭಾ ಗಂಗೊಳ್ಳಿ ಘಟಕದಿಂದ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗೆ ಭೇಟಿ.

0
40

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಸೆಸಾಂವ್ ಮಾತೆಯ ಚರ್ಚ್ ಘಟಕ, ಗಂಗೊಳ್ಳಿ ಇದರ ಸದಸ್ಯರು ಪಾಂಬೂರಿನ “ಮಾನಸ ವಿಶೇಷ ಮಕ್ಕಳ ಶಾಲೆಗೆ” ಭೇಟಿ ನೀಡಿ ಒಂದು ದಿನವನ್ನು ಆ ಶಾಲೆಯ ವಿದ್ಯಾರ್ಥಿಗಳೊಂದಿಗೆ ವ್ಯಹಿಸಿದರು.

ಕಥೊಲಿಕ್ ಸಭೆಯಿಂದ ಆರಂಭಗೊಂಡು , ಕಥೊಲಿಕ್ ಸಭೆಯ ನೇತೃತ್ವದಲ್ಲಿ ನಡೆಸಲ್ಪಡುವ “ಮಾನಸ ಪಾಂಬೂರು” ಶಾಲೆಯ ವಿಶೇಷ ಮಕ್ಕಳೊಂದಿಗೆ ಬೆರೆತು ಅವರನ್ನು ಖುಷಿ ಪಡಿಸುವ ಉದ್ದೇಶದೊಂದಿಗೆ ಭೇಟಿಯನ್ನು ಆಯೋಜಿಸಲಾಗಿತ್ತು.

ಮಾನಸ, ಪಾಂಬೂರು ಸಂಸ್ಥೆಯ ಪ್ರಾಜೆಕ್ಟ್ ಕೊಆರ್ಡಿನೇಟರ್ ಅನಿಲ್ ದಾಂತಿ ಯವರು ಸಂಸ್ಥೆಯ ಮಕ್ಕಳೊಂದಿಗೆ ಸರ್ವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿಮಾನಸ ಸಂಸ್ಥೆಯ ವಿಶೇಷ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಮಕ್ಕಳನ್ನು ಸಂತೋಷ ಪಡಿಸಲಾಯಿತು.

ಮಾಸಸ ಸಂಸ್ಥೆಯ ಕೋಶಾಧಿಕಾರಿಗಳಾದ ಜೋಸೆಫ್ ನೊರೊನ್ಹಾರವರು ಸಂಸ್ಥೆಯ ಪರಿಚಯ ನೀಡಿದರು. ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀಯತ ಓವಿನ್ ರೆಬೆಲ್ಲೊರವರು ಈ ಸಂದರ್ಭದಲ್ಲಿ ಮಾತನಾಡಿ ಮಾನಸ ಸಂಸ್ಥೆಯ ಕಾರ್ಯವೈಖರಿ, ವಿದ್ಯಾರ್ಥಿಗಳಲ್ಲಿಯ ಶಿಸ್ತು ಮತ್ತು ಆತ್ಮೀಯತೆಯನ್ನು ಹಾಗೂ ಸಂಸ್ಥೆಯ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು. ಶೀಮತಿ ಜೆನ್ನಿ ಬುತ್ತೆಲ್ಲೊ ಹಾಗೂ ಶ್ರೀಮತಿ ಸೆಲಿನ್ ಲೋಬೊ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಗೆ ಕಥೊಲಿಕ್ ಸಭಾ ಗಂಗೊಳ್ಳಿಯ ವತಿಯಿಂದ ಆಹಾರ ಸಾಮಗ್ರಿಗಳನ್ನು ಹಾಗೂ ದೇಣಿಗೆಯನ್ನು ನೀಡಲಾಯಿತು.
ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಕಾರ್ಯದರ್ಶಿ ಜಾನೆಟ್ ಡಾಯಸ್ ವಂದಿಸಿದರು. ಎಲ್ರೋಯ್ ಕಿರಣ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು. ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಕೋಶಾಧಿಕಾರಿ ರೋಶನ್ ಲೋಬೊ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಅಗಪಿತಾಸ್ ಫ್ರೆಂಕಿ ರೆಬೆರೊ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here